

ಕಲಬುರಗಿ: ವಿದ್ಯಾರ್ಥಿಗಳು ಜೀವನ, ಸಮಯದ ಮಹತ್ವ ಅರಿತು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಆಲೋಚನೆ, ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂದು ಗೊಬ್ಬುರವಾಡಿಯ ಶ್ರೀ ಬಳಿರಾಮ ಮಹಾರಾಜರು ನುಡಿದರು.
ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವದ ಆಶೀರ್ವಚನ ನೀಡಿ, ಶಕ್ತಿ ಅರಿತು ರಾಷ್ಟಾçಭಿವೃದ್ಧಿಗೆ ಬಳಸಬೇಕು ಎಂದರು.
ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಯುವಕರು ಮೂಲ ಅರಿತು ಸಾಗಬೇಕು. ಸಂಸ್ಕೃತಿ, ಸಂಪ್ರದಾಯ ಪಾಲಿಸಬೇಕು. ಆಧುನಿಕ ಶಿಕ್ಷಣ ಅರಿತು, ಉನ್ನತ ಗುರಿ ಹೊಂದಬೇಕು. ಪ್ರೀತಿ, ಶಾಂತಿ, ಸೌಹಾರ್ದ ಸಂದೇಶ ಸಾರುವಲ್ಲಿ ಸೇವಾಲಾಲ ಮಹಾರಾಜರ ಕೊಡುಗೆ ಅಪಾರ ಎಂದರು.
ಪ್ರೊ.ದಶರಥ ಎಸ್.ನಾಯಕ್ ಗೊರ ಸಮುದಾಯದ ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯದ ಬಗ್ಗೆ ಮಾತನಾಡಿದರು. ಪ್ರೊ.ಆರ್.ಆರ್.ಬಿರಾದಾರ್ ಅವರು ಸ್ವಾತಂತ್ರö್ಯ ಹೋರಾಟದಲ್ಲಿ ಬಂಜಾರ ಸಮುದಾಯದ ಕೊಡುಗೆ ಮತ್ತು ಭಾರತದ ಶ್ರೀಮಂತ ಸಂಸ್ಕೃತಿಯನ್ನು ಕುರಿತು ಮಾತನಾಡಿದರು. ಗ್ರಂಥಪಾಲಕ ಡಾ.ಪಿ.ಎಸ್. ಕಟ್ಟಿಮನಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ.ಗಣೇಶ ಪವಾರ ವಂದಿಸಿದರು.