ರಾಷ್ಟಿçÃಯ ಕಬಡ್ಡಿಗೆ ಗ್ರಾಮೀಣ ಪ್ರತಿಭೆ

01 hunasagi 01 - Venugopal
Published on

ಹುಣಸಗಿ: ಸಾಧನೆಗೆ ಬಡತನ ಅಡ್ಡಿಯಾಗದು ಎಂಬ ಮಾತಿಗೆ ರಾಷ್ಟಿçÃಯ ಕಬಡ್ಡಿ ತಂಡದಲ್ಲಿ ಕರ್ನಾಟಕದಿಂದ ಸ್ಥಾನ ಪಡೆದ ಹೆಬ್ಬಾಳ(ಬಿ) ಗ್ರಾಮದ ಯುವಕನೇ ಸಾಕ್ಷಿ.

ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ರಾಷ್ಟಿçÃಯ ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದಿಂದ ಸ್ಪರ್ಧಿಸಿದ ವೇಣುಗೋಪಾಲ ಹೊಪ್ಪರಗಿಯೇ ಯಾದಗಿರಿ ಜಿಲ್ಲೆಯ ಪ್ರತಿಭಾನ್ವಿತ ಕ್ರೀಡಾಪಟು. ತಂದೆ ಬೆಂಗಳೂರಿನಲ್ಲಿ ಗಾರೆ(ಕೂಲಿ) ಹಾಗೂ ತಾಯಿ ಮನೆ ಮನೆಗಳಿಗೆ ತೆರಳಿ ಕೆಲಸ ಮಾಡಿ ಮೂವರು ಮಕ್ಕಳೊಂದಿಗೆ ಸಂಸಾರ ಸಾಗಿಸುತ್ತಿದ್ದಾರೆ. ಕೊನೆಯ ಮಗ ವೇಣುಗೋಪಾಲ ಓದಿನೊಂದಿಗೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾನೆ.

ಸದ್ಯ ಪಿಯುಸಿ ದ್ವಿತಿಯ ವರ್ಷದಲ್ಲಿ ಓದುತ್ತಿರುವ ವೇಣುಗೋಪಾಲ ಕಬಡ್ಡಿಯನ್ನು ಎಂಟನೇ ತರಗತಿಯಿಂದಲೇ ಆಟವಾಡಲು ಶುರು ಮಾಡಿದ್ದಾನೆ. ಅಂಡರ್-೧೬ ರಾಷ್ಟಿçÃಯ ತಂಡವನ್ನು ಪ್ರತಿನಿಧಿಸಿ ಸೈನಿಸಿಕೊಂಡ ಬಳಿಕ ಇದೀಗ ಅಂಡರ್-೧೮ ರಾಷ್ಟಿçÃಯ ತಂಡವನ್ನು ಪ್ರತಿನಿಧಿಸುತ್ತಿದ್ದಾನೆ. ರಾಜ್ಯ, ರಾಷ್ಟಿçÃಯ ಮಟ್ಟದಲ್ಲಿ ೧೫ಕ್ಕೂ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡು ಗಿರಿ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಬಡತನದಿAದಾಗಿ ರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾದ ಈ ಪ್ರತಿಭೆಗೆ ಮನೆಯಲ್ಲಿ ಕಬಡ್ಡಿಗೆ ಅಷ್ಟೇನೂ ಬೆಂಬಲ ಸಿಗುತ್ತಿಲ್ಲ. ಆಟ ಒಂದೆಡೆ ಇರಲಿ, ಓದಿನತ್ತ ಹೆಚ್ಚು ಗಮನಹರಿಸು ಎನ್ನುತ್ತಾರೆ ತಂದೆ. ಆದರೆ ನನಗೆ ಓದಿಗಿಂತ ಕಬಡ್ಡಿ ಆಟದತ್ತ ಹೆಚ್ಚು ಆಸಕ್ತಿ ಇದ್ದು, ಅಂತಾರಾಷ್ಟಿçÃಯ ಮಟ್ಟದಲ್ಲಿ ನಡೆಯುವ ಏಷಿಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳುವುದು ನನ್ನ ಗುರಿ. ಅದನ್ನು ಸಾಧಿಸಲು ಒಂದೇ ಮೆಟ್ಟಿಲು ಬಾಕಿ ಇದೆ. ಸದ್ಯದ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಆಟಗಾರರನ್ನು ಗುರುತಿಸಿ ರಾಷ್ಟಿçÃಯ ತಂಡ ಪ್ರಕಟಿಸಲಾಗುತ್ತದೆ. ಭಾರತವನ್ನು ಪ್ರತಿನಿಧಿಸಬೇಕೆಂಬ ಆಶಯ ನನ್ನದು ಎನ್ನುತ್ತಾನೆ ವೇಣುಗೋಪಾಲ.

ಬಡ ಕುಟುಂಬದ ಕ್ರೀಡಾ ಪ್ರತಿಭೆಗೆ ಸಹಾಯಹಸ್ತ ಚಾಚಲು ಬಯಸುವವರು ವೇಣುಗೋಪಾಲ (ಮೊ.ನಂ.೭೨೦೪೩ ೦೩೩೮೪) ಅವರನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net