ಬಸವಕಲ್ಯಾಣ: ರಾಶಿ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಭಾನುವಾರ ಘೋಟಾಳ ಗ್ರಾಮದಲ್ಲಿ ಜರುಗಿದೆ. ಈರಮ್ಮ ವೀರಯ್ಯ ಸ್ವಾಮಿ(45) ಮೃತಳು. ಮಲ್ಲಿನಾಥ ಮುಕ್ತಾ ಅವರ ಜಮೀನಿನಲ್ಲಿ ನಡೆಯುತ್ತಿದ್ದ ಜೋಳದ ರಾಶಿ ವೇಳೆ ಯಂತ್ರದ ಬಳಿ ನಿಂತಿದ್ದ ಈರಮ್ಮ ಧರಿಸಿದ್ದ ಸ್ಕಾಫರ್್ ಯಂತ್ರದ ಬೇರಿಂಗ್ನಲ್ಲಿ ಸಿಲುಕಿ ಕೊರಳಿಗೆ ಉರುಳು ಬಿದ್ದು ಘಟನೆ ಸಂಭವಿಸಿದೆ. ಸುದ್ದಿ ತಿಳಿಯುತ್ತಲೇ ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್ಐ ಕಿರಣ ಧೋತ್ರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಡಿದು ಸಾವು: ಕಿಣ್ಣಿವಾಡಿ ಗ್ರಾಮದಲ್ಲಿ ಶನಿವಾರ ಹಾವು ಕಡಿದು ವಿಮಲಾಬಾಯಿ ಮಾರುತಿ ಕಾಮರೆಡ್ಡಿ(45) ಮೃತಪಟ್ಟಿದ್ದಾಳೆ. ತನ್ನ ಮನೆ ಹಿಂಭಾಗದಲ್ಲಿ ಹುಲ್ಲು ತರಲು ಹೋದಾಗ ಹಾವು ಕಡಿದಿದೆ. ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.