

ಕಲಬುರಗಿ: ಅವರಾದ (ಬಿ) ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ರಾಶಿ ಮಶೀನ್ ಹಾದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಶರಣಬಸಪ್ಪ ಮೃತ ವ್ಯಕ್ತಿ. ಅವರಾದ (ಬಿ) ಗ್ರಾಮದಲ್ಲಿನ ಸಂಬAಧಿಕರ ಮದುವೆ ಮುಗಿಸಿಕೊಂಡು ಪತ್ನಿ ಜತೆಗೆ ಕಲಬುರಗಿಗೆ ವಾಪಸ್ ಆಗಲು ರಾಷ್ಟಿçÃಯ ಹೆದ್ದಾರಿ ಬಸ್ ನಿಲ್ಲುವ ಕಡೆ ನಡೆಯುವ ವೇಳೆ ರಾಶಿ ಮಶೀನ್ ವಾಹನದ ಚಾಲಕ ನಿರ್ಲಕ್ಷÈದಿಂದ ಅಪಘಾತ ಸಂಭವಿಸಿದ್ದು, ಕೆಳಗೆ ಬಿದ್ದಿದ್ದ ಶರಣಬಸಪ್ಪ ಅವರ ಮೇಲೆ ಚಕ್ರ ಚಲಾವಣೆ ಆಗಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಾಲಕ ಮಶೀನ್ ಬಿಟ್ಟು ಪರಾರಿಯಾಗಿದ್ದಾನೆ ಎಂಬ ಪತ್ನಿ ಭಾಗ್ಯಶ್ರೀ ದೂರಿನಂತೆ ಸಂಚಾರಿ ಪೊಲೀಸ್ ಠಾಣೆ ೨ರಲ್ಲಿ ಪ್ರಕರಣ ದಾಖಲಾಗಿದೆ.