ರಾವೂರ ಗ್ರಾಪಂಗೆ ಸುಮಿತ್ರಾ ಅಧ್ಯಕ್ಷೆ

PH 03
Published on

ಚಿತ್ತಾಪುರ: ರಾವೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಸುಮಿತ್ರಾ ತುಮಕೂರ, ಉಪಾಧ್ಯಕ್ಷರಾಗಿ ವಿಕಾಸ ದಾವೂಜಿ ಅವರೋಧ ಆಯ್ಕೆಯಾದರು.

ಎರಡನೇ ಅವಧಿಗಾಗಿ ಶನಿವಾರ ಚುನಾವಣೆ ನಡೆದಿದ್ದು, ಒಟ್ಟು 32 ಸದಸ್ಯರಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ 9 ಮೆಂಬರ್ ಗೈರಾಗಿದ್ದರು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸುಮಿತ್ರಾ, ವಿಕಾಸ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಮಲ್ಲಣ್ಣ ದೇಸಾಯಿ ತಿಳಿಸಿದರು. ಪಿಡಿಒ ಮಹಾದೇವ ದ್ಯಾಮ, ಸದಸ್ಯರಾದ ಗೋವಿಂದ ಸಗರ, ಚಂದ್ರಶೇಖರ, ಶಿವಯೋಗಿ, ರಫೀಕ್ ಸೇಠ್, ಹಾಜಿಲಾಲ್, ಶಾಂತಮ್ಮ, ಗಂಗಾಬಾಯಿ, ಮೀನಾಕ್ಷಿ, ದೇವಕಿ, ಸುಲೋಚನಾ ಇತರರಿದ್ದರು.

ವಿಜಯೋತ್ಸವ: ಕಾಂಗ್ರೆಸ್ ಬೆಂಬಲಿತ ಸುಮಿತ್ರಾ ಹಾಗೂ ವಿಕಾಸ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಕೆಪಿಸಿಸಿ ಸದಸ್ಯ ಶ್ರೀನಿವಾಸ ಸಗರ, ಜಿಪಂ ಮಾಜಿ ಸದಸ್ಯ ಅಜೀಜ್ ಸೇಠ್, ಪ್ರಮುಖರಾದ ಮಲ್ಲಿಕಾರ್ಜುನ ತುಮಕೂರು, ಗುರುನಾಥ್ ಗುದ್ಗಲ್, ಶಿವಶರಣಪ್ಪ ಕೊಳ್ಳಿ, ಮಶಾಕ್ ಸೇಠ್, ಬಸವರಾಜ ಸೂಲಹಳ್ಳಿ, ಸೂರ್ಯಕಾಂತ ಕಾಳೇಕರ್, ಇರ್ಫಾನ್ ಸೇಠ್, ಶೇಷಪ್ಪ ಜಡಿ, ಯಲ್ಲಾಲಿಂಗ, ಫಿರೋಜ್, ಶಿವು ಕಂಠಿಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net