ರಾವಸಾಹೇಬ ಪಾಟೀಲ ಕಾರ್ಯ ಮಾದರಿ

25Brg1
Published on

ಬೋರಗಾಂವ: ನಮ್ಮ ತಂದೆ ದಿ.ರಾವಸಾಹೇಬ ಪಾಟೀಲ ಶಾಶ್ವತ ಕಾರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಜೀವನದಲ್ಲಿ ರಾಜಕೀಯ ಸೇರಿ ಯಾವುದೇ ಸ್ಥಾನಮಾನ ನಿರೀಕ್ಷಿಸದೆ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ ಎಂದು ಯುವ ನಾಯಕ ಉತ್ತಮ ಪಾಟೀಲ ಹೇಳಿದರು.

ಪಟ್ಟಣದ ಅರಿಹಂತ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾವಸಾಹೇಬ ಪಾಟೀಲ ಅವರ ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದಿ.ರಾವಸಾಹೇಬ ದಾರಿಯಲ್ಲೆ ನಾನು ಮತ್ತು ಸಹೋದರ ಅಭಿನಂದನ ಪಾಟೀಲ ಮುನ್ನಡೆಯುತ್ತಿದ್ದೇವೆ. ಅವರು ಸ್ಥಾಪಿಸಿದ ಅರಿಹಂತ ಉದ್ಯೋಗ ಸಮೂಹ ಮುಂದುವರಿಯಲು ಎಲ್ಲರ ಸಹಕಾರ ಅಗತ್ಯವಿದೆ. ಅವರ ನಿಧನ ಬಳಿಕ ಸಂಸ್ಥೆಯ ನಿರ್ದೇಶಕ ಮಂಡಳಿ ಮತ್ತು ಸಾರ್ವಜನಿಕರು ನಮಗೆ ನೀಡಿರುವ ಶಕ್ತಿ ಮೇಲೆಯೇ ನಾವು ಮತ್ತೆ ಹುರುಪಿನಿಂದ ಕೆಲಸ ಮಾಡುತ್ತಿದ್ದೇವೆ. ಪಾಟೀಲ ಕುಟುಂಬದ ಮೇಲೆ ಎಲ್ಲರ ಪ್ರೀತಿ ಇರಲಿ ಎಂದು ದಾದಾ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡು ಭಾವುಕರಾದರು.

ದಾದಾ ಎಲ್ಲರಿಗೂ ಸ್ಪೂರ್ತಿ: ರಾವಸಾಹೇಬ ಅವರ ಕೆಲಸ ಎಲ್ಲರಿಗೂ ಸ್ಪೂರ್ತಿದಾಯಕವಾಗಿತ್ತು. ನಾವು ಅವರ ನೀತಿ ಮತ್ತು ಆಲೋಚನೆ ಗಮನದಲ್ಲಿಟ್ಟುಕೊಂಡು ಮುನ್ನಡೆಯುತ್ತಿದ್ದೇವೆ. ಅರಿಹಂತ ಉದ್ಯೋಗ ಗ್ರೂಪ್ ಬೆಳವಣಿಗೆಗೆ ದಾದಾ ಹಗಲಿರುಳು ದುಡಿದಿದ್ದಾರೆ. ಸಂಸ್ಥೆ ಪದಾಧಿಕಾರಿಗಳು ದಾದಾ ತೆಗೆದುಕೊಂಡ ನಿರ್ಧಾರಗಳೊಂದಿಗೆ ದೃಢವಾಗಿ ಉಳಿದಿದ್ದರಿಂದ ಇಂದು ಅರಿಹಂತ ಉದ್ಯೋಗ ಸಂಸ್ಥೆ ಸಹಕಾರಿ ಕ್ಷೇತ್ರದಲ್ಲಿ ಮಾದರಿಯಾಗಿದೆ. ಅವರ ಋಣವನ್ನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಗಣ್ಯರು ದಾದಾ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಡಾ.ಎಂ.ಡಿ.ದೀಕ್ಷಿತ್, ಜಿಪಂ ಮಾಜಿ ಉಪಾಧ್ಯಕ್ಷ ಪಂಕಜ ಪಾಟೀಲ, ಅರಿಹಂತ ಸಂಸ್ಥೆ ಉಪಾಧ್ಯಕ್ಷ ಸತೀಶ ಪಾಟೀಲ, ಬೋರಗಾಂವ ಪಪಂ ಅಧ್ಯಕ್ಷ ಪಿಂಟು ಕಾಂಬಳೆ, ಉಪಾಧ್ಯಕ್ಷೆ ಭಾರತಿ ವಸವಾಡೆ, ಸದಲಗಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪ್ರಕಾಶ ಪಾಟೀಲ, ಪಪಂ ಸದಸ್ಯ ಅಭಯಕುಮಾರ ಮಗದುಮ, ರಾಜು ಮಗದುಮ, ಅಶೋಕ ಮಾಳಿ, ಬಾಬಾಸೋ ವಠಾರೆ, ಸಚಿನ ಬಿಂದಗೆ, ಮುಖ್ಯಾಧಿಕಾರಿ ಎಸ್.ಬಿ.ತೋಡಕರ, ತಾತ್ಯಾಸಾಹೇಬ ಪಾಟೀಲ, ಅರಿಹಂತ ಸಂಸ್ಥೆಯ ಸಿಇಒ ಅಶೋಕ ಬಂಕಾಪುರೆ, ಆರ್.ಟಿ.ಚೌಗುಲಾ, ಜೀವಂಧರ ಫಿರಗನ್ನವರ, ಪ್ರಕಾಶ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net