

ರಾವಂದೂರು: ದೀಪಾವಳಿ ಹಬ್ಬದ ಪ್ರಯುಕ್ತ ಮಲೆ ಮಾದೇಶ್ವರರ ಉತ್ಸವ ವಿಜೃಂಭಣೆಯಿಂದ ಜರುಗಿತು.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಲೆ ಮಾದೇಶ್ವರ ಉತ್ಸವ ವಿಜೃಂಭಣೆಯಿಂದ ನಡೆಯಿತು. ಮಲೆ ಮಾದೇಶ್ವರ ಮುಖವಾಡವನ್ನು ಧರಿಸಿ ತದನಂತರ ದೇವಾಲಯಕ್ಕೆ ತಂದು ವಿಶೇಷ ಪೂಜೆ ಹವನ ಸಲ್ಲಿಸಲಾಯಿತು ಹಾಗೂ ದೇವಾಲಯಕ್ಕೆ ಬಂದ ಸಾವಿರಾರು ಭಕ್ತರಿಗೆ ಆರ್. ಎಸ್. ಕುಮಾರ್ ವಿಜಯ್ ಅನ್ನಸಂತರ್ಪಣೆ ನೆರವೇರಿಸಿದರು. ತದನಂತರ ಮಲೆ ಮಾದೇಶ್ವರ ಭಾವಚಿತ್ರವನ್ನು ಹಾಗೂ ಗ್ರಾಮ ದೇವತೆ ದೊಡ್ಡಮ್ಮ ತಾಯಿ ಉತ್ಸವ ಮೂರ್ತಿಯನ್ನು ಮಂಗಳವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮುಖಂಡರಾದ ಆರ್.ಟಿ ಸತೀಶ್, ಆರ್. ಎಸ್ ಸುರೇಶ್, ಎಚ್.ಎಸ್.ಸ್ವಾಮಿ,ಆರ್ ಎಸ್.ವಿಜಯಕುಮಾರ್ , ರಾಜೇಂದ್ರಾರಾಧ್ಯ, ಆರ್ ಎಂ ದಿನೇಶ್, ಮಾದೇಶ್ ಹಾಗೂ ಗ್ರಾಮದ ಯುವಕರು ಮುಖಂಡರು ಹಾಜರಿದ್ದರು.