ರಾರಾಜಿಸಿದ 1547 ಅಡಿ ಉದ್ದದ ರಾಷ್ಟ್ರಧ್ವಜ

Thirangha
Published on

ಚಿತ್ರದುರ್ಗ: ವೀರವನಿತೆ ಒನಕೆ ಓಬವ್ವ ವೃತ್ತದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಸಂಬಂಧ 1,547 ಅಡಿ ಉದ್ದದ ತ್ರಿವರ್ಣ ಧ್ವಜ ಮಂಗಳವಾರ ರಾರಾಜಿಸಿತು. ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡು ದೇಶಪ್ರೇಮ ಮೆರೆದರು.

ಸಂಸದ ಗೋವಿಂದ ಎಂ ಕಾರಜೋಳ ಚಾಲನೆ ನೀಡಿ ಮಾತನಾಡಿ, 78ನೇ ಸ್ವಾತಂತ್ರೊೃೀತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಆ. 13ರಿಂದ 15ರ ವರೆಗೂ ಹರ್ ಘರ್ ತಿರಂಗಾ ಅಭಿಯಾನ ರಾಷ್ಟ್ರಾದ್ಯಂತ ನಡೆಯಲಿದ್ದು, ಜಿಲ್ಲೆಯ ಎಲ್ಲರೂ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಪ್ರೇಮ ಮೆರೆಯಬೇಕು ಎಂದು ಮನವಿ ಮಾಡಿದರು.

ಸ್ವಾತಂತ್ರೃ ಪೂರ್ವಜರ ತ್ಯಾಗ-ಬಲಿದಾನದ ಕೊಡುಗೆ. ಹಿಂದಿನ ಪ್ರಧಾನಿಗಳು ದೇಶದ ಏಳ್ಗೆಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. 140 ಕೋಟಿ ಪ್ರಜೆಗಳಲ್ಲೂ ಪಿಎಂ ನರೇಂದ್ರ ಮೋದಿ ಅವರು ದೇಶಾಭಿಮಾನ ಮೂಡಿಸಲು ಮುಂದಾಗಿದ್ದಾರೆ. ಅದರ ಒಂದು ಭಾಗವೇ ಈ ಅಭಿಯಾನ. ಧ್ವಜಾರೋಹಣ ವೇಳೆ ಭಾವುಟಕ್ಕೆ ಅಗೌರವ ತೋರಬೇಡಿ. ಕಡ್ಡಾಯವಾಗಿ ಧ್ವಜ ಸಂಹಿತೆ ಪಾಲಿಸಿ ಎಂದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, 15ರ ವರೆಗೂ ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಸರ್ಕಾರಿ, ಖಾಸಗಿ ಕಚೇರಿ ಸೇರಿ ಎಲ್ಲರ ಮನೆ ಮೇಲೂ ದೇಶದ ತ್ರಿವರ್ಣ ಧ್ವಜ ವಿಜೃಂಭಿಸಬೇಕು. ಇದಕ್ಕೆ ಪ್ರತಿಯೊಬ್ಬ ಭಾರತೀಯ ಸಾಕ್ಷಿಯಾಗಬೇಕು. ಈ ಮೂಲಕ ಮಕ್ಕಳಲ್ಲೂ ದೇಶಭಕ್ತಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ, ಮುಖಂಡರಾದ ಸುರೇಶ್ ಸಿದ್ಧಾಪುರ, ಸಂಪತ್‌ಕುಮಾರ್, ಮಾಧುರಿ ಗಿರೀಶ್, ಜಿ.ಎಸ್.ಅನಿತ್‌ಕುಮಾರ್, ಸೌಭಾಗ್ಯಾ ಬಸವರಾಜನ್, ಕೆ.ಮಲ್ಲಿಕಾರ್ಜುನ್, ವೆಂಕಟೇಶ್‌ಯಾದವ್, ನವೀನ್ ಚಾಲುಕ್ಯ, ದಗ್ಗೆ ಶಿವಪ್ರಕಾಶ್, ಛಲವಾದಿ ತಿಪ್ಪೇಸ್ವಾಮಿ, ನಗರಸಭೆ ಸದಸ್ಯರಾದ ಹರೀಶ್, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net