

ಸುಂಟಿಕೊಪ್ಪ: ನಾರಾಯಣ ಗುರು ಬಿಲ್ಲವ ಸೇವಾ ಸಂಘ, ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ, ಬಿಲ್ಲವ ವಿದ್ಯಾರ್ಥಿ ಘಟಕದ ಸಹಯೋಗದಲ್ಲಿ ನಾರಾಯಣ ಗುರುಗಳ ಜಯಂತ್ಯುತ್ಸವ ಅಂಗವಾಗಿ ಜಿಲ್ಲಾ ಮಟ್ಟದ ಬಿಲ್ಲವ ಕ್ರೀಡಾಕೂಟ ನಡೆಯಿತು.
ಮಾದಾಪುರದ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯನ್ನು ಸೋಮವಾರಪೇಟೆ ತಾಲೂಕು ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಡಿ.ಪದ್ಮನಾಭ ಉದ್ಘಾಟಿಸಿದರು.
ಸುಂಟಿಕೊಪ್ಪ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ಸೋಮವಾರಪೇಟೆ ಬಿರ್ವರ ಬ್ರದರ್ಸ್ ತಂಡಗಳ ನಡುವೆ ಮೊದಲ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಸುಂಟಿಕೊಪ್ಪ ತಂಡ ನಿಗದಿತ 4 ಓವರ್‌ಗಳಲ್ಲಿ 27 ರನ್‌ಗಳನ್ನು ಕಲೆ ಹಾಕಿತು. ಅದರಂತೆ ಸೋಮವಾರಪೇಟೆ ತಂಡ ಕೇವಲ 3.4 ಓವರ್‌ಗಳಿಗೆ 28 ರನ್ ಗಳಿಸಿ ಗೆಲುವು ಸಾಧಿಸಿತು.
ಎರಡನೇ ಪಂದ್ಯ ಸುಂಟಿಕೊಪ್ಪದ ಬಿಲ್ಲವ ಸ್ಕಾರ್ಪಿನ್ಸ್ ಮತ್ತು ಅಮ್ಮತ್ತಿ ಬಿಲ್ಲವ ಟೈಗರ್ಸ್ ನಡುವೆ ಜರುಗಿತು. ಅಮ್ಮತ್ತಿ ತಂಡವು ಜಯಗಳಿಸಿತು. ನಂತರ ನಡೆದ ಬಿಲ್ಲವ ಪ್ಯಾಂಥರ್ಸ್ ಸುಂಟಿಕೊಪ್ಪ ಮತ್ತು ಚಂದನ್ ಬ್ರದರ್ಸ್ ಅಮ್ಮತ್ತಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಮ್ಮತ್ತಿ ತಂಡ ಜಯಗಳಿಸಿತು.
ಮೊದಲ ಸೆಮಿಫೈನಲ್ ಪಂದ್ಯವು ರಾಯಲ್ ಪೂಜಾರಿ ಮಡಿಕೇರಿ ಮತ್ತು ಚಂದನ್ ಬ್ರದರ್ಸ್ ಅಮ್ಮತ್ತಿ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಮಡಿಕೇರಿ ತಂಡ ನಿಗದಿತ 5 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 53ರನ್ ಗಳಿಸಿತು. ಆದರೆ, ಅಮ್ಮತ್ತಿ ತಂಡವು 5 ಓವರ್‌ಗಳಿಗೆ 28 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಗಿ ಸೋಲೊಪ್ಪಿತು. ರಾಯಲ್ ಚಾಲೆಂಜರ್ಸ್ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತ್ತು.
ಎರಡನೇ ಸೆಮಿಫೈನಲ್ ಪಂದ್ಯವು ಟೈಟನ್ ಮಕ್ಕಂದೂರು ಮತ್ತು ಬಿಲ್ಲವ ಟೈಗರ್ಸ್ ಅಮ್ಮತ್ತಿ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಮಕ್ಕಂದೂರು ತಂಡವು ನಿಗದಿತ 5 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿತು. 58 ರನ್‌ಗಳ ಬೆನ್ನತ್ತಿದ್ದ ಅಮ್ಮತ್ತಿ ತಂಡವು 4 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿ ಸೋತಿದ್ದರಿಂದ ಮಕ್ಕಂದೂರು ತಂಡ ಫೈನಲ್ ಪ್ರವೇಶಿಸಿತು.
ನಂತರ ರಾಯಲ್ ಪೂಜಾರಿ ಮಡಿಕೇರಿ ಮತ್ತು ಟೈಟರ್ಸ್ ಮಕ್ಕಂದೂರು ತಂಡಗಳ ನಡುವೆ ನಡೆದ ಫೈನಲ್ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಮಾಡದ ಮಡಿಕೇರಿ ರಾಯಲ್ ಪೂಜಾರಿ ತಂಡವು ನಿಗದಿತ 6 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 69 ರನ್ ಕಲೆ ಹಾಕಿ 70ರಗಳ ಗುರಿ ನೀಡಿತು. ಗುರಿ ಬೆನ್ನತ್ತಿದ್ದ ಮಕ್ಕಂದೂರು ಟೈಟರ್ಸ್ ತಂಡ 4 ವಿಕೆಟ್ ಕಳೆದುಕೊಂಡು 35ರನ್ ಗಳಿಸಿ ಸೋಲು ಕಂಡಿತು. ಮಡಿಕೇರಿ ರಾಯಲ್ ಪೂಜಾರಿ ತಂಡವು ಬಿಲ್ಲವ ಟ್ರೋಫಿ ತನ್ನದಾಗಿಸಿಕೊಂಡಿತು.
ಫೈನಲ್ ಪಂದ್ಯವನ್ನು ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಹಿರಿಯ ಸದಸ್ಯೆ ಜಯಂತಿ ಕೃಷ್ಣಪ್ಪ, ಬಿಲ್ಲವ ಸಂಘದ ಗೌರವಾಧ್ಯಕ್ಷ ಬಿ.ಕೆ.ಮೋಹನ್, ಸಂಘದ ಅಧ್ಯಕ್ಷ ಮಣಿ ಮುಖೇಶ್ ಉದ್ಘಾಟಿಸಿದರು. ಸಂಘದ ಕಾರ್ಯದರ್ಶಿ ವೆಂಕಪ್ಪ ಕೋಟ್ಯನ್, ಸದಸ್ಯರಾದ ನಾಗೇಶ್ ಪೂಜಾರಿ, ಬಾಲಕೃಷ್ಣ, ದೇವಪ್ಪ, ದಿನೇಶ್ ತೊಂಡೂರು, ಬಿಲ್ಲವ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರೀತಂ, ಕಾರ್ಯದರ್ಶಿ ಯಶ್ವಿತ್ ಪೂಜಾರಿ, ಹರ್ಷಿತ್ ಪೂಜಾರಿ, ಗಗನ್ ಪೂಜಾರಿ, ಜೀವನ್ ಪೂಜಾರಿ ಇದ್ದರು.