ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ

1ark1
Published on

ಅರಕಲಗೂಡು: ರಾಮನಾಥಪುರದ ಉತ್ತರಾದಿ ಮಠದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಮಧ್ಯಾರಾಧನೆ ಮಹೋತ್ಸವ ಅಂಗವಾಗಿ ಶುಕ್ರವಾರ ವೃಂದಾವನಕ್ಕೆ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನೆರವೇರಿದವು.
ಬೆಳಗ್ಗೆ ಅಷ್ಟೋತ್ತರ ಪಾರಾಯಣ ನಂತರ ರಾಯರ ವೃಂದಾವನಕ್ಕೆ ಪಂಚಾಮೃತಾಭಿಷೇಕ, ಹೂವಿನ ಅಲಂಕಾರ ಹಾಗೂ ಮಹಾ ಮಂಗಳಾರತಿ ನಡೆಯಿತು. ಮೈಸೂರಿನ ಉಪನ್ಯಾಸಕ ಶ್ರೀನಾಥಾಚಾರ್ ರಾಘವೇಂದ್ರ ಸ್ವಾಮಿಗಳ ಮಹಿಮೆ ಕುರಿತು ಪ್ರವಚನ ನೀಡಿದರು.
ಸಂಗೀತ ಕಾರ್ಯಕ್ರಮ: ಬೆಂಗಳೂರು ವಿದ್ವಾನ್ ಪ್ರಾದೇಶಾಚಾರ್ ಅವರು ಪ್ರಸ್ತುತಪಡಿಸಿದ ಶಾಸ್ತ್ರೀಯ ಸಂಗೀತ ಕಛೇರಿ ಭಾವಪೂರ್ಣವಾಗಿತ್ತು. ಮಠದ ವ್ಯವಸ್ಥಾಪಕ ಕನಕಾಚಾರ್ಯ, ಸಾಹಿತಿ ಅರ್.ಕೆ. ಶ್ರೀನಿವಾಸ್ ಅಯ್ಯಂಗಾರ್, ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಪಾರುಪತ್ತೇದಾರ ರಮೇಶ ಭಟ್ ನಲ್ಲಿತೀರ್ಥ, ಪಟ್ಟಾಭಿರಾಮಸ್ವಾಮಿ ದೇವಾಲಯದ ನಿವೃತ್ತ ಪಾರುಪತ್ತೇದಾರ ಅರ್.ಎಸ್. ನರಸಿಂಹಮೂರ್ತಿ, ಸಂಸ್ಕೃತ ಶಿಕ್ಷಕ ಲಕ್ಷ್ಮೀಕಾಶಿ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net