

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 352ನೇ ಆರಾಧನೆ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿರುವ ಸಪ್ತ ರಾತ್ರೋತ್ಸವದ ಎರಡನೇ ದಿನವಾದ ಬುಧವಾರ ರಾಯರ ಮೂಲ ಬೃಂದಾವನವನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.
ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಮೂಲ ರಾಮದೇವರ ಪೂಜೆ ಹಾಗೂ ರಾಯರ ಮೂಲ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಇದಕ್ಕೂ ಮೊದಲು ಶ್ರೀಮಠದ ಪ್ರಾಕಾರದಲ್ಲಿ ಶಾಖೋತ್ಸವ, ರಜತ ಮಂಟಪೋತ್ಸವ ನೆರವೇರಿಸಲಾಯಿತು. ದಾಸ ಮಂಟಪದಲ್ಲಿ ಬೆಂಗಳೂರಿನ ಎ.ಗುರುಪ್ರಸಾದಾಚಾರ್‌ರಿಂದ ಭಾಗವತ ಸಪ್ತಾಯ ಉಪನ್ಯಾಸ ಕಾರ್ಯಕ್ರಮ ನೆರವೇರಿತು.
ಸಂಜೆ ಯೋಗೀಂದ್ರ ಸಭಾ ಮಂಟಪದಲ್ಲಿ ಬೆಂಗಳೂರಿನ ಡಾ.ಎಚ್.ಎಸ್.ಅನುಸೂಯ ಕುಲಕರ್ಣಿ, ಆರ್.ಕೆ.ಪ್ರಸನ್ನಕುಮಾರರಿಂದ ಗಾಯನ ಮತ್ತು ಕಲಾಬಿಂದು ತಂಡದಿಂದ ಭರತನಾಟ್ಯ ಪ್ರದರ್ಶನ ಜರುಗಿತು.