

ಮೈಸೂರು: ಶ್ರೀಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಮೈಸೂರು ಯುವ ಬಳಗದಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಗುರು ರಾಘವೇಂದ್ರ ಮಠದಲ್ಲಿ ಗುರುವಾರ ತುಳಸಿ ಗಿಡ ವಿತರಿಸಲಾಯಿತು.
ಶಾಸಕ ಕೆ. ಹರೀಶ್‌ಗೌಡ ಅವರು ಮಾತನಾಡಿ, ಕಲಿಯುಗದ ಕಾಮಧೇನು ಗುರುರಾಘವೇಂದ್ರ ರಾಯರು ಭಕ್ತರ ಕಷ್ಟವನ್ನು ನಿವಾರಿಸುತ್ತಾರೆ. ನಾಲ್ಕು ಶತಮಾನದ ಹಿಂದೆಯೇ ಜನಿಸಿದ ರಾಯರು ತಿರುಪತಿ ವೆಂಕಟೇಶ್ವರರ ಕೃಪೆಯಿಂದ ಜಾತಿಮತ ಧರ್ಮದ ಬೇಧವಿಲ್ಲದೆ ಸಕಲ ಜೀವರಾಶಿಗೂ ಸಲುಹುತ್ತಿದ್ದಾರೆ, ಸಶರೀರವಾಗಿ ಬೃಂದಾವನಸ್ಥರಾಗಿರುವದರಿಂದ ಕಂಪನ ತರಂಗ ಸ್ಪಂದನ ರಾಯರ ಪವಾಡ ಗಳಿಸಿದ್ದ ತಪಸ್ಸಿನ ಶಕ್ತಿಯನ್ನು ಭಕ್ತಾಧಿಗಳಿಗೆ ಧಾರೆಯೆರಿದು ಕಷ್ಟಕಾರ್ಪಣ್ಯಗಳನ್ನ ನಿವಾರಿಸಿ ಕೋಟ್ಯಾಂತರ ಭಕ್ತರ ಮನೆಮನದಲಿದ್ದಾರ ಎಂದು ಹೇಳಿದರು
ಮುಡಾ ಮಾಜಿ ಸದಸ್ಯ ನವೀನ್‌ಕುಮಾರ್, ಮುಖಂಡರಾದ ಮಾದೇವಣ್ಣ ,ರಾಜೀವ್, ರವಿಚಂದ್ರ ,ನಂಜುಂಡಿ, ಲೋಕೇಶ್ ,ವಾಟರ್ ವರ್ಕ್ಸ್ಸ ಬಸವರಾಜು, ನಾಗರಾಜ್, ವರುಣ ಮಹದೇವ್, ಕಾಂತಿಲಾಲ್, ಆನಂದ, ಮಂಜುಳಾ ,ಶಾಂತಿ ,ಮಂಗಳ, ಜಗದೀಶ್ , ವಿಘ್ನೇಶ್ವರ ಭಟ್, ನವೀನ ಇತರರು ಇದ್ದರು.