

ರಾಯಬಾಗ: ಪಟ್ಟಣವನ್ನು ಸುಂದರಗೊಳಿಸಲು ಅಂಬೇಡ್ಕರ್ ವೃತ್ತದಿಂದ ದಿಗ್ಗೇವಾಡಿ ರಸ್ತೆಯವರೆಗಿನ ಎರಡು ಬದಿಯಲ್ಲಿ ಬೀದಿ ದೀಪ ಅಳವಡಿಸಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ದಿಗ್ಗೇವಾಡಿ ರಸ್ತೆವರೆಗೆ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಒಟ್ಟು 90 ಲಕ್ಷ ರೂ. ಅನುದಾನದಲ್ಲಿ ರಸ್ತೆ ಬದಿಯಲ್ಲಿ ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದರು. ಅಧಿಕಾರಿಗಳು ಮುಂದೆ ನಿಂತು ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಮಾಡಿಸಬೇಕೆಂದು ಸೂಚಿಸಿದರು. ಅಣ್ಣಾಸಾಹೇಬ ಖೇಮಲಾಪುರೆ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ಸಂಗಣ್ಣ ದತ್ತವಾಡೆ, ಸುರೇಶ ಮಾಳಿ, ಮಹೇಶ ಕರಮಡಿ, ಜಿಯಾವುಲ್ಲಾ ಮುಲ್ಲಾ, ಅಜ್ಜಪ್ಪ ಕುಲಗುಡೆ, ದತ್ತಾ ಜಾಧವ, ಪಿಡಬ್ಲ್ಯುಡಿ ಎಇಇ ಕೆ.ಎಂ.ಹಂಚಿನಮನಿ ಇದ್ದರು.