

ಢವಳಗಿ: ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನೂತನ ಮೂರ್ತಿಯನ್ನು ಡೊಳ್ಳು, ವಾಲಗ ಮತ್ತು ಡಿಜೆ ಮೆರವಣಿಗೆ ಮೂಲಕ ಪ್ರತಿಷ್ಠಾಪನೆ ಮಾಡಲಾಯಿತು.
ಅದಕ್ಕೂ ಮುಂಚೆ ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹಾಲುಮತ ಸಮಾಜದ ಮುಖಂಡರು ಮೂರ್ತಿಗೆ ಹೂಮಾಲೆ ಹಾಕಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ ವೃತ್ತದ ಮೂಲಕ ಬಿದರಕುಂದಿ ಗ್ರಾಮದ ಮಾರ್ಗವಾಗಿ ಮೆರವಣಿಗೆ ಮೂಲಕ ಮೂರ್ತಿಯನ್ನು ಢವಳಗಿ ಗ್ರಾಮಕ್ಕೆ ತರಲಾಯಿತು.
ಢವಳಗಿ ಗ್ರಾಮದ ವಾಲ್ಮೀಕಿ ವೃತ್ತದಿಂದ ಮಹಿಳೆಯರು ಕಳಸ ಹಿಡಿದು ಮೆರವಣಿಗೆಗೆ ಮೆರಗು ನೀಡಿದರು. ನಂತರ ಮೂರ್ತಿ ಪ್ರತಿಷ್ಟಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು.
ಸಂಪತ್‌ಕುಮಾರ ಕೋರಿ, ಹಣಮಂತ ಹಡಗಲಿ, ಸುರೇಶ ಪಾಟೀಲ, ಶಾಂತು ಹೊಸಮನಿ, ಸಂಗಮೇಶ ಬಿರಾದರ, ಕೇಶವ ಗುಡಿಮನಿ, ಅಣ್ಣಪ್ಪ ಹಡಗಲಿ, ಮಡಿವಾಳಪ್ಪ ಬೀರಗೊಂಡ, ನಾಗಪ್ಪ ರೂಡಗಿ, ಶ್ರೀಶೈಲ ಕೋಣನವರ, ರಮೇಶ ಹೂಗಾರ, ಸಿದ್ದಪ್ಪ ಬೀರಗೊಂಡ, ಅಣ್ಣಪ್ಪ ತಾರನಾಳ, ಆನಂದಯ್ಯ ಮಠಪತಿ, ಮಂಜು ಮೊಕಾಶಿ, ರೇವಣಸಿದ್ದ ಬೀರಗೊಂಡ, ಮುತ್ತು ಬೀರಗೊಂಡ, ವಿಜಯಕುಮಾರ ಬೀರಗೊಂಡ, ಶಿವಾನಂದ ಮೇಟಿ ಇತರರಿದ್ದರು.