ರಾಯಣ್ಣನ ಪ್ರತಿಮೆ ತೆರವು ಮಾಡುವ ಹುನ್ನಾರ ನಡೆಸಿದರೆ ಉಗ್ರ ಹೋರಾಟ :ರಾಜಶೇಖರ್ ದೊಡ್ಡಯ್ಯ

ರಾಯಣ್ಣನ ಪ್ರತಿಮೆ ತೆರವು ಮಾಡುವ ಹುನ್ನಾರ ನಡೆಸಿದರೆ ಉಗ್ರ ಹೋರಾಟ :ರಾಜಶೇಖರ್ ದೊಡ್ಡಯ್ಯ
Published on

ಹೊಳೆನರಸೀಪುರ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಗ್ಗೆ ಇರುವ ತಮ್ಮ ಧೋರಣೆಯನ್ನು ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಬದಲಿಸಿಕೊಳ್ಳದಿದ್ದರೆ ರಾಜ್ಯಾದ್ಯಂತ ಅವರ ಪಕ್ಷವನ್ನು ಬಹಿಷ್ಕಾರ ಮಾಡಬೇಕಾಗುತ್ತದೆ ಎಂದು ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ರಾಜ್ಯಾಧ್ಯಕ್ಷ ರಾಜಶೇಖರ್ ದೊಡ್ಡಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.

ಅವರು ತಾಲೂಕಿನ ಶ್ರವಣೂರು ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ. ಶಾಸಕ ಎಚ್ ಡಿ ರೇವಣ್ಣ 144 ಸೆಕ್ಷನ್ ಜಾರಿಗೊಳಿಸಿ  ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು  ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸ್ವಪ್ರತಿಷ್ಠ ಜಾತಿ ರಾಜಕೀಯ ಕೋಮು ಸೌಹಾರ್ದತೆಯನ್ನು ಕದಡುವ ಇವರ ಈ ನಿಲುವನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ನುಡಿದರು.

  ಜೆಡಿಎಸ್ ಪಕ್ಷ ಕೇವಲ ಅರಕಲಗೂಡಿಗೆ ಮಾತ್ರ ಸೀಮಿತವಾಗಿಲ್ಲ ಕರ್ನಾಟಕ ರಾಜ್ಯದ್ಯಂತ ಇದೆ ನೀವೇನಾದರೂ ರಾಯಣ್ಣನ ಪ್ರತಿಮೆ ತೆರವು ಮಾಡುವ ಹುನ್ನಾರ ನಡೆಸಿದರೆ ಕರ್ನಾಟಕ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. 

 ಈ ಕ್ಷೇತ್ರದ ಜನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಲು ಬಯಸುತ್ತಿದ್ದಾರೆ. ಅದರ ವಿರುದ್ಧವಾಗಿ ನಿಮ್ಮ ನಿಲುವು ಇರುವುದು ಪ್ರಜಾಪ್ರಭುತ್ವದ ವಿರೋಧಿ ಎಂದೆ ಭಾವಿಸಬೇಕಾಗುತ್ತದೆ. ಪ್ರಜೆಗಳ ವಿರೋಧವನ್ನು ಕಟ್ಟಿಕೊಂಡು ಯಾವ ಪುರುಷಾರ್ಥಕ್ಕಾಗಿ ಈ ಕೆಲಸವನ್ನು ಮಾಡುತ್ತಿದ್ದೀರಾ ಎಂಬುದು ಅರ್ಥವಾಗುತ್ತಿಲ್ಲ.ತಮ್ಮ ಸ್ವಪ್ರತಿಷ್ಠೆ ಜಾತಿ ರಾಜಕಾರಣ ಕೋಮು ಸೌಹಾರ್ದತೆಯನ್ನು ಕದಡವ ಕೆಲಸವನ್ನು ಬಿಟ್ಟು ಜನ ಸೇವೆ ಮಾಡುವುದರ ಮೂಲಕ ಜನ ಮನ್ನಣೆ ಗಳಿಸಬೇಕೆಂದು ಶಾಸಕ ಎಚ್ ಡಿ ರೇವಣ್ಣನವರಿಗೆ ಕಿವಿಮಾತು ಹೇಳಿದರು.

ಒಂದು ಸಮುದಾಯದ ವಿರುದ್ಧ ತಮ್ಮ ನಿಲುವನ್ನು ಬದಲಾಯಿಸಿಕೊಳ್ಳದಿದ್ದರೆ ಈ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಸ್ತಿತ್ವಕ್ಕೆ ಬರಲು ಸಾಧ್ಯವೇ ಇಲ್ಲ. ಎಲ್ಲಾ ಕೋಮಿನ ಜನ ಸಮುದಾಯ ಜೆಡಿಎಸ್ ಬಿಟ್ಟು ಹೊರಗೆ ಹೋಗುವ ಸಂಭವ ಹೆಚ್ಚಿದ್ದು ಜೆಡಿಎಸ್ ಗೆ ಕರ್ನಾಟಕದಲ್ಲಿ ಉಳಿಗಾಲ ಇಲ್ಲದಂತಾಗುತ್ತದೆ ಎಂದು ಹರಿ ಹಾಯ್ದರು.

ತಾಲೂಕಿನ ಶ್ರವಣೂರು ವೃತ್ತದವನ್ನೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಎಂದು ಘೋಷಣೆ ಮಾಡದಿದ್ದರೆ ಮುಂದಿನ ದಿನ ಎಲ್ಲಾ ಸಂಘಟನೆಗಳನ್ನು ಕರೆತಂದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಒಂದು ಬಾರಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ ಮೇಲೆ ಹಿಂಜರಿಯುವ ಮಾತೇ ಇಲ್ಲ ಏನಾದರೂ ತೆರವು ಗೊಳಿಸಲು ಪ್ರಯತ್ನಿಸಿದರೆ ರಾಯಣ್ಣನಿಗೆ ಅವಮಾನ ಮಾಡಿದಂತಾಗುತ್ತದೆ . ಒಬ್ಬ ದೇಶಪ್ರೇಮಿಗೆ ಕೊಡುವ ಗೌರವನ ಇಂತಹ ಮಹಾಪುರುಷರಿಗೆ ದುರ್ಗತಿ ತಂದಿಟ್ಟಿರುವುದು ಸರಿಯಲ್ಲ ಈ ತರದ ನೀಚ ರಾಜಕಾರಣವನ್ನು ಬಿಡಬೇಕು ಜನರಿಗೆ ತೊಂದರೆ ಕೊಡುವದನ್ನು ಬಿಡಬೇಕು ಒಗ್ಗಟ್ಟಿನಿಂದ ಇರುವ ಜನಗಳ  ಜಾತಿ ಜಾತಿಗಳ ನಡುವೆ ದ್ವೇಷವನ್ನು ಬಿತ್ತುತ್ತಿದ್ದೀರಿ ಈ ಕ್ಷೇತ್ರದ ಜನರು ಎಲ್ಲರೂ ಒಗ್ಗಟ್ಟಾಗಿದ್ದಾರೆ ನೆಮ್ಮದಿಯನ್ನು ಹಾಳು ಮಾಡುವ ಕೆಲಸ ಮಾಡಬೇಡಿ, ತಮ್ಮ ಸ್ವಪ್ರತಿಷ್ಠ ಗೋಸ್ಕರ ಜನರನ್ನು ಬಲಿಕೊಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ .ಇದೆಲ್ಲವನ್ನು ಇಲ್ಲಿಗೆ ನಿಲ್ಲಿಸಿ ರಾಯಣ್ಣನಿಗೆ ಸಿಗಬೇಕಾದ ಎಲ್ಲಾ ಸಕಲ ಗೌರವವನ್ನು ಕೊಟ್ಟರೆ ಮುಂದಿನ ದಿನಮಾನಗಳಲ್ಲಿ ಈ ಕ್ಷೇತ್ರದಲ್ಲಿ ಉಳಿಗಾಲವಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲೂಕು ಕುರುಬ ಸಮಾಜದ ಉಪಾಧ್ಯಕ್ಷ ಬಾಗಿವಾಳು ಮಂಜೇಗೌಡ ಜಿ ಪಂ ಮಾಜಿ ಸದಸ್ಯ ಚಂದ್ರಶೇಖರ್, ಕೆಪಿಸಿಸಿ ಸದಸ್ಯ ಹೊನ್ನಿಕೊಪ್ಪಲು  ಮಂಜೇಗೌಡ, ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ದಾಶರಥ, ಪುಟ್ಟೇಗೌಡ   ಮತ್ತಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net