ರಾಮೋತ್ಸವದ ಅಂಗವಾಗಿ ಭವ್ಯ ಶೋಭಾಯಾತ್ರೆ

Shobhayathre
Published on

ಚಿತ್ರದುರ್ಗ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಂಪನ್ನಗೊಂಡ, 2024ರ ಹರಿದಾಸ ಹಬ್ಬದ ಅಂಗವಾಗಿ ಶ್ರೀಹರಿವಾಯು ಗುರು ಸೇವಾ ಟ್ರಸ್ಟ್ನಿಂದ ನಗರದಲ್ಲಿ ಶುಕ್ರವಾರ ಶ್ರೀರಾಮನ ಹಬ್ಬ ಆಚರಣೆಯೊಂದಿಗೆ ಭವ್ಯ ಶೋಭಾಯಾತ್ರೆ ಜರುಗಿತು.

ಆನೆಬಾಗಿಲ ಸಮೀಪದ ಸುವೃಷ್ಠಿ ಪ್ರಾಣದೇವರ ಸನ್ನಿಧಾನದಿಂದ ಶೋಭಾಯಾತ್ರೆಗೆ ಚಾಲನೆ ದೊರೆಯಿತು. ಅಲ್ಲಿಂದ ಗಾಂಧಿ ವೃತ್ತ, ಬಿ.ಡಿ.ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಧರ್ಮಶಾಲಾ ರಸ್ತೆ, ಐಯ್ಯಣ್ಣನ ಪೇಟೆ ಮಾರ್ಗವಾಗಿ ಸಂಚರಿಸಿ ವಾಸವಿ ವಿದ್ಯಾಸಂಸ್ಥೆ ತಲುಪಿತು.

ಈ ಯಾತ್ರೆಯಲ್ಲಿ ಶ್ರೀರಾಮ, ಆಂಜನೇಯನ ಮೂರ್ತಿಗಳು, ಕನಕದಾಸರ, ಪುರಂದರದಾಸರ, ವಿಜಯದಾಸರ,
ಗೋಪಾಲದಾಸರ, ಜಗನ್ನಾಥದಾಸರ ಭಾವಚಿತ್ರಗಳು ಗಮನ ಸೆಳೆದವು. ಚಂಡೆ, ನಾದಸ್ವರ, ವೀರಗಾಸೆ ಇತರೆ ಮಂಗಳ ವಾದ್ಯಗಳೊಂದಿಗೆ ಸಂಚರಿಸಿತು.

ಬೆಳ್ಳಿ ವರ್ಣದ ಸಾರೋಟಿನಲ್ಲಿ ಆಸೀನರಾಗಿದ್ದ ಭೀಮನಕಟ್ಟೆ ಭೀಮಸೇತು ಮುನಿವೃಂದ ಮಠದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ನೇತೃತ್ವ ವಹಿಸಿ, ಭಕ್ತರಿಗೆ ಆಶೀರ್ವದಿಸಿದರು. ಹಿರಿಯರು-ಕಿರಿಯರೆನ್ನದೇ ನೂರಾರು ಮಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net