

ತುಮಕೂರು: ಹೆಬ್ಬೂರು ಹೋಬಳಿ ರಾಮೇನಹಳ್ಳಿ ಶ್ರೀ ಸಿದ್ದಲಿಂಗೇಶ್ವರ ಮಠ (ಗಟ್ಟಿಯಪ್ಪ ಮಠ)ದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಶ್ರೀಮಠ ಹಾಗೂ ಭಕ್ತರ ನಡುವೆ ಸಂರ್ಷ ಏರ್ಪಟ್ಟಿದ್ದು, ಶನಿವಾರ ಮಠಕ್ಕೆ ಮುತ್ತಿಗೆ ಹಾಕಿ ಗ್ರಾಮಸ್ಥರು ಶ್ರೀ ಶಿವ ಪಂಚಾಕ್ಷರಿ ಸ್ವಾಮೀಜಿ ವಿರುದ್ಧ ಹರಿಹಾಯ್ದರು. ಪೂಜೆ ವಿಚಾರದಲ್ಲಿ ಶುರುವಾದ ಜಗಳ ಗ್ರಾಮಸ್ಥರು ಮಠಕ್ಕೆ ಮುತ್ತಿಗೆ ಹಾಕಿ ಸ್ವಾಮೀಜಿ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುವಂತೆ ಮಾಡಿದೆ. ಪರಂಪರೆಯುಳ್ಳ ಶ್ರೀಮಠಕ್ಕೆ ಗ್ರಾಮಸ್ಥರು ದಾನವಾಗಿ ನೀಡಿದ್ದ ಜಮೀನನ್ನು ಶಿವಪಂಚಾಕ್ಷರಿ ಸ್ವಾಮೀಜಿ ಮಾರಾಟ ಮಾಡಿದ್ದಾರೆ ಎಂಬುದು ಸ್ಥಳಿಯರ ಆರೋಪ. ಸ್ವಾಮೀಜಿ ಮೊದಲಿ ನಿಂದಲೂ ಮಠಕ್ಕೆ ಬರುವ ಭಕ್ತರಿಗೆ ಅವಾಚ್ಯಶಬ್ದಗಳಿಂದ ನಿಂದಿಸುತ್ತಿದ್ದರು. ಅವರ ನಡೆ&ನುಡಿ ಸರಿಯಿರಲಿಲ್ಲ. ಪೂಜೆ ವಿಚಾರದಲ್ಲೂ ಸ್ವಾಮೀಜಿಯನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ, "ದೇವಸ್ಥಾನಕ್ಕೆ ದುಡ್ಡು ಕೊಡೋ ಯೋಗ್ಯತೆ ಇಲ್ಲ. ಮಾತನಾಡುತ್ತೀರಾ' ಎಂದು ಕಠೋರವಾಗಿ ಪ್ರತಿಕ್ರಿಸಿದ್ದು, ಗಲಾಟೆಗೆ ಇನ್ನೊಂದು ಕಾರಣ ಎನ್ನಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.