ರಾಮಾವತಾರದಲ್ಲಿ ಬರಗೇರಮ್ಮ

Baragerammadevi
Published on

ಚಿತ್ರದುರ್ಗ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿ ದೇಗುಲದಲ್ಲಿ ಶ್ರೀರಾಮನನ್ನೇ ಹೋಲುವ ಮಾದರಿಯಲ್ಲಿ ದೇವಿ ಮೂರ್ತಿಗೆ ವಿವಿಧ ಬಗೆಯ ಪುಷ್ಪಗಳಿಂದ ಸೋಮವಾರ ಅಲಂಕಾರ ಸೇವೆ ಜರುಗಿತು.

ಭಕ್ತರಿಗೆ ಮಹಾಮಂಗಳಾರತಿ, ಪ್ರಸಾದ ವಿತರಿಸಲಾಯಿತು. ಉಚ್ಚಂಗಿಯಲ್ಲಮ್ಮ ಸೇರಿ ಹಲವು ಶಕ್ತಿದೇವತೆ, ನೀಲಕಂಠೇಶ್ವರ ಸ್ವಾಮಿ ಒಳಗೊಂಡು ಶಿವನ ದೇಗುಲಗಳಲ್ಲೂ ಪೂಜೆ, ಪ್ರಾರ್ಥನೆ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net