ರಾಮಾಯಣ, ಮಹಾಭಾರತ ಓದಿರಿ

Oplus_131072
Oplus_131072
Published on

ಹಲಗೂರು: ರಾಮಾಯಣ, ಮಹಾಭಾರತ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಚಂದ್ರೇಗೌಡ ಹೇಳಿದರು.

ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಡಿ.ಆರ್.ಗುರು ಶಿಷ್ಯರ ಬಳಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳನ್ನು ಸಮಾಜದ ಏಳಿಗೆಗಾಗಿ ಕೊಡುಗೆ ನೀಡುವ ನಿಟ್ಟಿನಲ್ಲಿ ಉತ್ತಮ ಪ್ರಜೆಗಳಾಗಿ ರೂಪಿಸಬೇಕು ಎಂದರು.

ಇತ್ತೀಚೆಗೆ ನಿವೃತ್ತರಾದ ಸಿದ್ದಯ್ಯ, ಬಸವರಾಜು, ಪ್ರಭಾಕರ್, ನರಸಿಂಹೇಗೌಡ, ರಮೇಶ್ ಅವರನ್ನು ಅಭಿನಂದಿಸಲಾಯಿತು .

ಡಿ.ಆರ್.ಗುರು ಶಿಷ್ಯರ ಬಳಗದ ಅಧ್ಯಕ್ಷ ಎ.ಎಸ್.ದೇವರಾಜು, ಕಾರ್ಯದರ್ಶಿ ರಾಜೇಶ್ವರಿ, ಖಜಾಂಚಿ ಅಭಿಜಿತ್ ಬಸವರಾಜು, ಪದಾಧಿಕಾರಿಗಳಾದ ತಮ್ಮಣ್ಣಗೌಡ, ಜಿ.ಎಸ್.ಕೃಷ್ಣ, ಚಂದ್ರೇಗೌಡ, ನಂಜರಾಜು, ಸುರೇಂದ್ರ, ಮಹೇಶ್, ಡಾ.ರಾಜು ಗುಂಡಾಪುರ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net