ರಾಮಾನುಜಾಚಾರ್ಯರ ಜಯಂತಿ ಆಚರಣೆ

Ramanujacharyaru
Published on

ಚಿತ್ರದುರ್ಗ: ವಿಶ್ವಕ್ಕೆ ಭಕ್ತಿಯ ಮಹತ್ವ ಸಾರಿ, ವಿಶಿಷ್ಟಾದ್ವೈತ ತತ್ವವನ್ನು ಪರಿಪೂರ್ಣವಾಗಿ ಸ್ಥಾಪಿಸಿದ ರಾಮಾನುಜಾಚಾರ್ಯರ 1007ನೇ ಜಯಂತಿಯನ್ನು ವೈಷ್ಣವ ಸಭಾದಿಂದ ತುರುವನೂರು ರಸ್ತೆಯ ವೆಂಕಟರಮಣ ಸ್ವಾಮಿ ಸನ್ನಿಧಿಯಲ್ಲಿ ಭಾನುವಾರ ಆಚರಿಸಲಾಯಿತು.

ಶ್ರುತಿ, ಸ್ಮತಿ, ಬ್ರಹ್ಮಸೂತ್ರಗಳು, ಪೂರ್ವಾಚಾರ್ಯರುಗಳ ಗ್ರಂಥಗಳನ್ನು ಆಧರಿಸಿ ವಿಶಿಷ್ಟಾದ್ವೈತ ತತ್ವವನ್ನು ನವರತ್ನಗಳೆಂದು ತಮ್ಮ ಒಂಬತ್ತು ಗ್ರಂಥಗಳ ಮೂಲಕ ಸ್ಥಾಪಿಸಿದ ಮಹಾನುಭಾವರು ಎಂದು ನೆರೆದಿದ್ದ ಭಕ್ತರು ರಾಮಾನುಜಾಚಾರ್ಯರನ್ನು ಸ್ಮರಿಸಿದರು.

ನಂತರ ದೇಗುಲ ಆವರಣದಲ್ಲಿ ರಾಮಾನುಜಾಚಾರ್ಯರ ಮೆರವಣಿಗೆ ನಡೆಯಿತು. ವೈಷ್ಣವ ಸಭಾ ಅಧ್ಯಕ್ಷ ಜಗದೀಶ್ ಜೆ.ಅಯ್ಯಂಗಾರ್, ಸಿ.ವಿ.ಭರತ್, ನಾರಾಯಣ ಭಟ್ಟರ್, ಸದಸ್ಯರಿದ್ದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net