ರಾಮಮಂದಿರ ಪ್ರಾಂಗಣದಲ್ಲಿ ಶಿವಲಿಂಗ ಸ್ಥಾಪಿಸಿ

30hos1p
Published on

ಹೊಸನಗರ: ಅಯೋಧ್ಯೆ ರಾಮಜನ್ಮ ಭೂಮಿ ಪ್ರದೇಶದಲ್ಲಿ ಶಿವಲಿಂಗ ಪ್ರತಿಷ್ಠಾಪನೆಗೆ ಅವಕಾಶ ಕೊಡಬೇಕು. ರಾಮ ಮಂದಿರ ನಿರ್ವಣಕ್ಕಾಗಿ ಭೂಮಿ ಸಮತಟ್ಟು ಮಾಡುವಾಗ 5 ಅಡಿ ಎತ್ತರದ ಶಿವಲಿಂಗ ಪತ್ತೆ ಆಗಿರುವುದರಿಂದ ಶಿವನಿಗೂ ಅಲ್ಲಿ ಪೂಜನೀಯ ಸ್ಥಾನ ದೊರೆಯಬೇಕು ಎಂದು ತಾಲೂಕು ವೀರಶೈವ ಸಮಾಜದ ಮುಖಂಡರು ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

ಶ್ರೀ ರಾಮ ಕೂಡ ಶಿವಭಕ್ತ, ಶ್ರೀ ರಾಮನೇ ರಾಮೇಶ್ವರ ನಿರ್ವಿುಸಿದ ಪೌರಾಣಿಕ ಪ್ರಸಂಗ ಸಹ ಮೂಲ ರಾಮಾಯಣದಲ್ಲಿ ಉಲ್ಲೇಖವಾದ ದಾಖಲೆ ಕೂಡ ಲಭ್ಯವಾಗಿದೆ. ಶಿವನ ಪರಮ ಭಕ್ತ ಶ್ರೀರಾಮ ಪೂಜಿಸುವಂತಹ ಶಿವಲಿಂಗವನ್ನು ಶ್ರೀರಾಮ ಮಂದಿರದ ಪ್ರಾಂಗಣದಲ್ಲಿ ನಿರ್ವಿುಸಿ, ದಿನವೂ ಪೂಜೆ ನಡೆಯುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.

ನಿಗಮಕ್ಕೆ ಒತ್ತಾಯ: ಈಗಾಗಲೇ ಎಲ್ಲ ಸಮಾಜದ ಮಂಡಳಿಗಳು ಸರ್ಕಾರದಿಂದ ರಚನೆ ಆಗಿವೆ. ಆರ್ಥಿಕವಾಗಿ ಹಿಂದುಳಿದ ವೀರಶೈವ-ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಬ್ರಹ್ಮೇಶ್ವರ ಚನ್ನಬಸಪ್ಪ ಗೌಡ, ಪ್ರಮುಖರಾದ ಚಂದ್ರಮೌಳಿ, ಬಿ.ಯುವರಾಜ್, ಈಶ್ವರಪ್ಪ ಗೌಡ, ಚಂದ್ರಶೇಖರ್, ದುಮ್ಮಾ ಅಶೋಕ್, ಹರತಾಳು ಜಯಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net