ರಾಮಮಂದಿರ ನಿರ್ಮಾಣಕ್ಕೆ ಗುದ್ದಲಿಪೂಜೆ

06rajesh3
Published on

ಚಾಮರಾಜನಗರ: ಗ್ರಾಮಗಳಲ್ಲಿ ನಿರ್ಮಾಣ ಮಾಡುವ ಸಮುದಾಯ ಭವನಗಳ ಸದ್ಭಳಕೆಗೆ ಸಮುದಾಯದವರು ಮುಂದಾಗಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ತಾಲೂಕಿನ ಬಿಸಲವಾಡಿ ಗ್ರಾಮದ ಕುಂಬಾರಶೆಟ್ಟಿ ಜನಾಂಗದ ಸಮುದಾಯದ ಬೀದಿಯಲ್ಲಿ 20 ಲಕ್ಷ ರೂ. ವೆಚ್ಚದ ನೂತನ ರಾಮಮಂದಿರ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮದಲ್ಲಿ ನಿರ್ಮಾಣ ಮಾಡಲಾಗುವ ರಾಮಮಂದಿರ ನಿರ್ಮಾಣ ಕಾಮಗಾರಿಗೆ 20ಲಕ್ಷ ರೂ.ಪೈಕಿ 5ಲಕ್ಷ ರೂ.ಬಿಡುಗಡೆಯಾಗಿದೆ. ಉಳಿದ ಅನುದಾನ ಹಂತಹಂತವಾಗಿ ಬಿಡುಗಡೆಯಾಗಲಿದೆ. ಸಮುದಾಯ ಭವನಗಳನ್ನು ಖಾಲಿಬಿಡದೇ, ಸದಾಚಟುವಟಿಕೆಯ ತಾಣವಾಗಿಸಬೇಕು. ಅವಶ್ಯವಿರುವೆಡೆ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.

ಈ ವೇಳೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಗ್ರಾ.ಪಂ ಮಾಜಿ ಅಧ್ಯಕ್ಷ ಮಹದೇವಪ್ಪ, ಶಾಂತಮಲ್ಲಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರವಿ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಶಿವಸ್ವಾಮಿ, ಮುಖಂಡರಾದ ನಾರಾಯಣ ನಾಯ್ಕ, ಸಿದ್ದನಾಯ್ಕ, ಚನ್ನಬಸಪ್ಪ, ಶಿವಾನಂದ, ಸಿದ್ದಮಲ್ಲಪ್ಪ, ಶಿವಕುಮಾರ್, ಶಿವಮಲ್ಲಪ್ಪ, ಮಹದೇವಯ್ಯ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net