

ಪಾಂಡವಪುರ: ತಾಲೂಕಿನ ಮೇಲುಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಕೆ.ಎನ್.ರಾಮಪ್ರಿಯ ಅವಿರೋಧವಾಗಿ ಆಯ್ಕೆಯಾದರು.
ಬಲರಾಮೇಗೌಡ ನಿಧನರಾದ ಹಿನ್ನೆಲೆಯಲ್ಲಿ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ರಾಮಪ್ರಿಯ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಪಾರ್ವತಿ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ಮತ್ತು ಹಿತೈಷಿಗಳು ಪಟಾಕಿ ಸಿಡಿಸಿ, ಸಹಿ ವಿತರಿಸಿ ಸಂಭ್ರಮಿಸಿದರು. ನೂತನ ಉಪಾಧ್ಯಕ್ಷರನ್ನು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ನಿರ್ದೇಶಕರು ಅಭಿನಂದಿಸಿದರು.
ಸಂಘದ ನಿರ್ದೇಶಕರಾದ ಶೇಖರ್, ಮಹೇಶ್, ಬಲರಾಮು, ಸಿಂಗ್ರೀಗೌಡ, ನಟರಾಜು, ಪ್ರಕಾಶ್, ಲಕ್ಷ್ಮಮ್ಮ, ಮಂಜುಳಾ, ಸವಿತಾ, ಕಾರ್ಯದರ್ಶಿ ಎಚ್.ತಮ್ಮೇಗೌಡ ಇತರರು ಇದ್ದರು.