ರಾಮಪ್ಪಗೆ ನೀಡಿ ಎಂಎಲ್ಸಿ ಸ್ಥಾನ

Kanaka
Published on

ಚಿತ್ರದುರ್ಗ: ಕಳೆದ 15 ವರ್ಷಗಳಿಂದ ಪಕ್ಷದ ಬಲವರ್ಧನೆಗಾಗಿ ಶ್ರಮಿಸುತ್ತಿರುವ ಮುಖಂಡ ನೇರ್ಲಗುಂಟೆ ರಾಮಪ್ಪ ಅವರನ್ನು ವಿಧಾನಪರಿಷತ್‌ಗೆ ನಾಮ ನಿರ್ದೇಶನಗೊಳಿಸಬೇಕು ಎಂದು ಕಾಂಗ್ರೆಸ್ ವರಿಷ್ಠರನ್ನು ಶಿಕ್ಷಕರ ಮತ್ತು ಪದವೀಧರರ ಸಂಘದ ರಾಜ್ಯ ಉಪಾಧ್ಯಕ್ಷ ಕನಕ ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಭೋವಿ ಸಮಾಜದ ಯಾರೊಬ್ಬರಿಗೂ ಕಾಂಗ್ರೆಸ್‌ನಿಂದ ಟಿಕೆಟ್ ನೀಡಿಲ್ಲ. ಈಗಲಾದರೂ ಸಮುದಾಯವನ್ನು ಪರಿಗಣಿಸಿ, ಮುಖಂಡ ರಾಮಪ್ಪ ಅವರಿಗೆ ಎಂಎಲ್ಸಿ ಮಾಡಬೇಕು ಎಂದು ಮನವಿ ಮಾಡಿದರು.

2014ರಿಂದ ರಾಮಪ್ಪ ಎಂಎಲ್ಸಿ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿದ್ದರೂ ಟಿಕೆಟ್ ಸಿಗಲಿಲ್ಲ. ಸಾಮಾಜಿಕ ನ್ಯಾಯದಡಿ ಅವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಮಾಜದಿಂದ ಒತ್ತಡ ಹೇರಲಿದ್ದೇವೆ ಎಂದರು.

ತಾಪಂ ಮಾಜಿ ಸದಸ್ಯ ಜಿ.ತಿಪ್ಪೇಸ್ವಾಮಿ, ಮುಖಂಡರಾದ ತಿಪ್ಪೇಸ್ವಾಮಿ, ಎಚ್.ರವೀಂದ್ರನಾಥ್, ಸುಧಾ, ಮುದಸಿರ್ ನವಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net