ರಾಮನಾಥಪುರದಲ್ಲಿ ಶ್ರೀರಾಮನ ಭಂಟ ಹನುಮ ಜಯಂತಿ

ರಾಮನಾಥಪುರದಲ್ಲಿ ಶ್ರೀರಾಮನ ಭಂಟ ಹನುಮ ಜಯಂತಿ
Published on


ಅರಕಲಗೂಡು: ತ್ರೇತಾಯುಗದ ಶ್ರೀರಾಮನ ಐತಿಹ್ಯ ಹೊಂದಿರುವ ಪುರಾಣ ಪ್ರಸಿದ್ದ ತಾಲೂಕಿನ ರಾಮನಾಥಪುರದಲ್ಲಿ ಶ್ರೀರಾಮನ ಭಂಟ ಹನುಮ ಜಯಂತಿಯನ್ನು ಶನಿವಾರ ಅತ್ಯಂತ ಸಡಗರ ಸಂಭ್ರಮಗಳಿಂದ ನೆರವೇರಿತು.
ಜೈ ಶ್ರೀರಾಮ ಸೇನೆ ವತಿಯಿಂದ ನಡೆದ ಎರಡನೇ ವ?ರ್ದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಪಟ್ಟಣ ಮಾತ್ರವಲ್ಲದೇ ಸುತ್ತಮುತ್ತಲ ಹಳ್ಳಿಗಳಿಂದ ಅಪಾರ ಭಕ್ತರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಹನುಮ ಜಯಂತಿ ಆಚರಣೆಗೆಂದು ಹೊಸದಾಗಿ ನಿರ್ಮಿಸಿರುವ ಅಂಜನೇಯ ಮೂರ್ತಿಯನ್ನು ಬೆಳಗ್ಗೆ ಶುಭ ಮುಹೂರ್ತದಲ್ಲಿ ಕಾವೇರಿ ನದಿಯಲ್ಲಿ ಪ್ರತಿ?್ಢಾಪಿಸಿ ಅಭಿ?ೇಕ, ವಿಶೇ?ವ ಪೂಜಾ ವಿಧಾನಗಳನ್ನು ಪೂರೈಸಲಾಯಿತು.


ಬಳಿಕ ಅಂಜನೇಯಸ್ವಾಮಿ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ಕೂರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಮಾರ್ಗವಾಗಿ ಸಾಗಿದ ವೈಭವೋಪೇತ ಮೆರವಣಿಗೆ ದಿನವಿಡೀ ಪ್ರಮುಖ ಬೀದಿಗಳಲ್ಲಿ ಸಾಗಿ ನೋಡುಗರ ಮೈನವಿರೇಳಿಸಿತು.


ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ, ಪೂಜಾ ಕುಳಿತ ಹನುಮ ವೇ?ದಾರಿಗಳು ನ್ಯತೃ ಪ್ರಸರ್ಶಿಸಿ ಗಮನ ಸೆಳೆದರು.
ಎತ್ತರದ ಹನುಮ ವೇ?ದಾರಿ ರಾಜಗಾಂಭೀರ್ಯ ನಡಿಗೆ ಮೆರವಣಿಗೆಯ ಆಕ?ರ್ಣೆ ಹೆಚ್ಚಿಸಿತು. ಹನುಮವೇ?ಧಾರಿ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹಾಗೂ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಲು ಯುವಕರು ಮುಗಿಬಿದ್ದರು.


ಲಂಕಾಸುರ ರಾವಣ ಪರಿವಾರ ಹತ್ಯೆಗೈದು ಪಾಪ ಪ್ರಾಯಶ್ಚಿತ್ತಕ್ಕಾಗಿ ಪು?್ಪಕ ವಿಮಾನದಲ್ಲಿ ಪವಿತ್ರ ರಾಮನಾಥಪುರಕ್ಕೆ ಬಂದಿರುವ ಕುರಿತು ಇತಿಹಾಸದಲ್ಲಿ ಪ್ರತೀತಿ ಹೊಂದಿರುವ ದಕ್ಷಿಣ ಕಾಶಿಯಲ್ಲಿ
ನಡೆದ ಶ್ರೀರಾಮನ ರಕ್ಷಕ ಖ್ಯಾತಿ ಹನುಮ ಜಯಂತಿ ಸಡಗರ ದಿನವಿಡೀ ಕಳೆಗಟ್ಟಿತ್ತು. ಪ್ರಮುಖ ಬೀದಿಗಳನ್ನು ಕೆಸರಿ ಬಾವುಟಗಳಿಂದ ಸಿಂಗರಿಸಿದ್ದು ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
ಮೆರವಣಿಗೆಗೆ ಚಾಲನೆ ನೀಡುವ ವೇಳೆಗೆ ಸಾವಿರಾರು ಭಕ್ತರಿಗೆ ಚಿತ್ರಾನ್ನ, ಮೊಸರನ್ನ, ಬೆಲ್ಲದನ್ನ, ಹಣ್ಣು ತುಪ್ಪ ನೈವೇದ್ಯವನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು. ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಜಾತ್ರೆಗೆ ಬಂದಿದ್ದ ಭಕ್ತರು ಸರದಿ ಸಾಲಿನಲ್ಲಿ ಧಾವಿಸಿ ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನದ ವೇಳೆಗೆ ಮೆರವಣಿಗೆ ಬಸ್ ನಿಲ್ದಾಣ ಸರ್ಕಲ್ ಗೆ ತೆರಳಿದ ನಂತರ ಗ್ರಾಮ ಪಂಚಾಯಿತಿ ಮುಂಭಾಗ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ, ಸಿಹಿ ಪಾನಕ ವಿತರಿಸಿ ಹನುಮನ ಭಕ್ತರು ಬಂದವರಿಗೆಲ್ಲ ಹಸಿವು ನೀಗಿಸಿ ಬಾಯಾರಿಕೆ ನಿವಾರಿಸುವ ಕೆಲಸ ಮಾಡಿದರು.


ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್, ಮಾಜಿ ಸಚಿವ ಎ. ಮಂಜು, ಬಿಜೆಪಿ ಮುಖಂಡ ಎಚ್. ಯೋಗಾರಮೇಶ್, ಕಾಂಗ್ರೆಸ್ ಮುಖಂಡರಾದ ಎಚ್.ಪಿ. ಶ್ರೀಧರ್ ಗೌಡ, ಡಾ. ದಿನೇಶ್ ಭೈರೇಗೌಡ, ಎಚ್.ಎನ್. ವಿಜಯ್ ಕುಮಾರ್, ತಾಲೂಕು ರೈತ ಸಂಘದ ಹಸಿರು ಸೇನೆ ಗೌರವಾಧ್ಯಕ್ಷ ಸಿ.ಡಿ. ದಿವಾಕರ್ ಗೌಡ, ಗ್ರಾಪಂ ಸದಸ್ಯರಾದ ಸಿದ್ದಯ್ಯ, ಮೋಹನ್, ಚಿತ್ರನಟ ಅಂಜನ್ ನಾಗೇಂದ್ರ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿ ಹನುಮನ ಕೃಪೆಗೆ ಪಾತ್ರರಾದರು.


ಜೈ ಭಜರಂಗಿ ಸೇರಿದಂತೆ ಡಿಜೆ ಸೌಂಡಿನ ಸಿನಿಮಾ ಹಾಡುಗಳಿಗೆ ಕುಣಿದು ಭಕ್ತರು ಭಕ್ತಿ ಪರಾಕಾ?್ಢೆ ಮೆರೆದರು. ಈ ವೇಳೆ ಚಿತ್ರನಟ ದರ್ಶನ್, ದಿ. ಪುನೀತ್ ರಾಜ್ ಕುಮಾರ್ ಭಾವಚಿತ್ರ ಹಿಡಿದು ಕುಣಿದು ಅಭಿಮಾನ ಪ್ರದರ್ಶಿಸಿದರು. ವಿವಿಧ ಕಲಾ ತಂಡಗಳ ಕಲಾವಿದರು ನೃತ್ಯ ಪ್ರದರ್ಶಿಸಿ ಮೆರವಣಿಗೆಗೆ ಮೆರಗು ನೀಡಿ ಜನರನ್ನು ರಂಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net