

ಕಲಬುರಗಿ: ತಾಲೂಕಿನ ಇಟಗಾ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಮದುವೆ ಸಮಾರಂಭದಲ್ಲಿ ಶ್ರೀರಾಮನ ಹಾಡು ಹಾಕಿ ನೃತ್ಯ ಮಾಡಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿರುವ ದೂರು ದಾಖಲಾಗಿದ್ದು, ಪ್ರತಿಯಾಗಿ ಹಲ್ಲೆ, ಜಾತಿ ನಿಂದನೆ ದೂರು ದಾಖಲಾಗಿದೆ.
ಭೀಮಾಶಂಕರ ದಾಸರ (೧೯) ಹಲ್ಲೆಗೆ ಒಳಗಾದ ಯುವಕ. ಸೋಮವಾರ ರಾತ್ರಿ ಗ್ರಾಮದ ಟಿಪ್ಪು ಕಟ್ಟೆ ಬಳಿ ಮೆರವಣಿಗೆ ಸಾಗುವಾಗ ಹಾಡು ಹಾಕಿ ನೃತ್ಯ ಮಾಡುವಾಗ ಖಾನ್‌ಪಾಶಾ, ಫಿರೋಜ್, ಖಾಜಾ ಎಂಬುವವರು ಅವಾಚ್ಯವಾಗಿ ನಿಂದಿಸಿ, ಈ ಹಾಡು ಹಾಕಿ ಡ್ಯಾನ್ಸ್ ಮಾಡುವ ಹಾಗಿಲ್ಲ ಎಂದು ಹೆದರಿಕೆ ಹಾಕಿದ್ದು, ಬಂದ್ ಮಾಡಿ ಮನೆಗೆ ಹೋಗಿದ್ದಾರೆ. ಆದರೆ ಮಂಗಳವಾರ ಬೆಳಗ್ಗೆ ಗ್ರಾಮದ ಹೊಟೇಲ್ ಬಳಿ ಭೀಮಾಶಂಕರ ದಾಸರ ಚಹಾ ಕುಡಿಯಲು ಹೋಗಿದ್ದಾಗ, ಖಾನ್‌ಪಾಶಾ, ಖಾಜಾಪಾಶಾ, ಮಶಾಕ್ ಪಟೇಲ್, ಫಿರೋಜ್, ಕಾಶಿಮ್, ಮದರ್, ನಯೀಮ್ ಇನ್ನಿಬ್ಬರು ಕೂಡಿಕೊಂಡು ಭೀಮಾಶಂಕರ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ಭೀಮಾಶಂಕರ ತಾಯಿ ತಾಳಿ ಕಡಿದಿದೆ. ಜೀವ ಬೆದರಿಕೆ ಹಾಕಿದ್ದಾರೆ ಎಂದು ಭೀಮಾಶಂಕರ ವಿಶ್ವವಿದ್ಯಾಲಯ ಠಾಣೆಗೆ ದೂರು ನೀಡಿದ್ದಾರೆ. ತಲೆಗೆ ಗಂಭೀರ ಗಾಯಗೊಂಡ ಯುವಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಲ್ಲೆ, ಜಾತಿ ನಿಂದನೆ ಪ್ರತಿ ದೂರು: ಜು.೨ರಂದು ಬೆಳಗ್ಗೆ ನಡೆದ ಘಟನೆಗೆ ಸಂಬAಧಿಸಿದAತೆ ಹ¯್ಲೆಗೆ ಒಳಗಾದ ಮತ್ತೊಬ್ಬ ಗಾಯಾಳು ಚಂದ್ರಕಾAತ ದೊಡ್ಡಮನಿ ದೂರು ನೀಡಿದ್ದಾರೆ. ಮಂಗಳವಾರ ಬೆಳಗ್ಗೆ ಭೀಮಾಶಂಕರ್‌ಗೆ ಫಿರೋಜ್‌ಖಾನ್‌ನು ನಿನ್ನೆ ಟಿಪ್ಪು ಚೌಕ್ ಹತ್ತಿರ ಏಕೆ ಡ್ಯಾನ್ಸ್ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ವಾಗ್ವಾದವಾಗಿದೆ. ಈ ವೇಳೆ ಅಂಬರೀಶ ಭೀಮಯ್ಯ ಈಡಿಗ, ಭೀಮಾಶಂಕರ ದಾಸರ, ಆಕಾಶ ಗೌಡರ, ಯಲ್ಲಪ್ಪ ನಾಯಿಕೊಡಿ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಚಂದ್ರಕಾAತ ಜಾತಿ ನಿಂದನೆ ಹಾಗೂ ಹ¯್ಲÉ ಪ್ರಕರಣ ದಾಖಲಿಸಿದ್ದಾರೆ.