ರಾಮದಾಸ್ ಕಾಲುಮುಟ್ಟಿ ನಮಸ್ಕರಿಸಿದ ಪ್ರತಾಪ ಸಿಂಹ!

21 (2)
Published on

ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ನಿರ್ಮಾಣ ಕುರಿತಂತೆ ವಿವಾದವೆಬ್ಬಿಸಿ ಶಾಸಕ ಎಸ್.ಎ.ರಾಮದಾಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಸಂಸದ ಪ್ರತಾಪ ಸಿಂಹ ಅವರು ಸೋಮವಾರ ಎಸ್.ಎ. ರಾಮದಾಸ್ ಅವರ ಕಾಲಮುಟ್ಟಿ ನಮಸ್ಕರಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.


ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವ ಸಮಾಜವಾದಿ ಪ. ಮಲ್ಲೇಶ್ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಬ್ರಾಹ್ಮಣ ಸಂಘಗಳ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಸಂಸದ ಪ್ರತಾಪ ಸಿಂಹ-ರಾಮದಾಸ್ ಮುಖಾಮುಖಿಯಾದರು. ಈ ವೇಳೆ ಕಾಲು ಮುಟ್ಟಿ ಪ್ರತಾಪ ಸಿಂಹ ಆಶೀರ್ವಾದ ಪಡೆದರು. ಜತೆಗೆ, ಅಕ್ಕಪಕ್ಕದಲ್ಲೇ ನಿಂತುಕೊಂಡಿದ್ದರು.


ರಾಮದಾಸ್ ವಿರುದ್ಧ ಟೀಕಾ ಪ್ರಹಾರ ನಡೆಸುವ ಪ್ರತಾಪ ಸಿಂಹ ಅವರ ಈ ನಡೆಯನ್ನು ಕಂಡು ಸ್ಥಳದಲ್ಲಿದ್ದವರು ಅಚ್ಚರಿಗೊಂಡರು. ಇಬ್ಬರೂ ಏನೂ ನಡೆದಿಲ್ಲ ಎಂಬಂತೆ ವರ್ತಿಸಿದರು. ಅಲ್ಲದೆ ಪ್ರತಿಭಟನೆಯಲ್ಲಿ ಭಾಷಣ ಮಾಡಿದ ಇಬ್ಬರೂ ಪರಸ್ಪರ ಹೆಸರು ಪ್ರಸ್ತಾಪಿಸಿ ಮಾತು ಮುಂದುವರಿಸಿದರು. ಇದು ಸಹ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net