ರಾಮತೀರ್ಥ ಅವದೂತರ ರಥೋತ್ಸವ 21ಕ್ಕೆ

Ramatheertharu
Published on

ಚಿತ್ರದುರ್ಗ: ಮೆದೇಹಳ್ಳಿ ಮಾರ್ಗದ ಶಾಂತಾರಾಮ ತೀರ್ಥಾಶ್ರಮದಲ್ಲಿ ಶ್ರೀ ಶಾಂತವದೂತರ, ರಾಜಯೋಗಿಸ್ವಾಮಿ ರಾಮತೀರ್ಥರ ರಥೋತ್ಸವ, ಜಗನ್ಮಾತಾ ಚೂಡಾಮಣಿ ಮಾತಾಜಿ ಅವರ ಪುಣ್ಯಾರಾಧನೆ ಜೂ. 21ರಂದು ಸಂಜೆ 4.30ಕ್ಕೆ ನಡೆಯಲಿದೆ.

ಅಂದು ಬ್ರಾಹ್ಮೀ ಮುಹೂರ್ತದಲ್ಲಿ ಕಳಸ ಸ್ಥಾಪನೆ, ಗಣಪತಿ, ನವಗ್ರಹ, ಗುರು ಪೂಜೆ, ಹೋಮ, ಪಂಚಾಮೃತಾಭಿಷೇಕ ನಂತರ ಮಹಾಮಂಗಳಾರತಿ ನೆರವೇರಲಿದೆ.

ಇದೇ ವೇಳೆ ಭಜನೆ, ಕೀರ್ತನೆ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ತೀರ್ಥಾಶ್ರಮ ಟ್ರಸ್ಟ್ ಸದಸ್ಯ ಗಿರೀಶ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net