ರಾಮಣ್ಣ ನಿಧನ

IMG-20201022-WA0041
Published on

ಮೈಸೂರು: ಸಮಾಜವಾದಿ ಪಕ್ಷದ ರಾಜ್ಯ ಎಸ್ ಸಿ ಎಸ್ ಟಿ ವಿಭಾಗದ ಅಧ್ಯಕ್ಷರಾಗಿದ್ದ  ರಾಮಣ್ಣ ಗುರುವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ನಗರದ ಸುಯೋಗ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಯರಗನಹಳ್ಳಿ ನಿವಾಸಿಯಾಗಿದ್ದ ಅವರು ಜಿಲ್ಲೆಯ ಮೇದಾರ್ ಜನಾಂಗದ ಮುಖಂಡರಾಗಿ ಜನಾನುರಾಗಿಯಾಗಿದ್ದರು.

ರಾಮಣ್ಣನವರ ನಿಧನಕ್ಕೆ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥ್ಯೂಸ್ ಮತ್ತು ಮಾಧ್ಯಮ ವಕ್ತಾರ ಎಸ್. ಪ್ರಕಾಶ್ ಬಾಬು ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net