ರಾಮಚಂದ್ರಾಪುರದಲ್ಲಿ ರಥೋತ್ಸವ ಸಂಭ್ರಮ

30 HOS 1
Published on

ಹೊಸನಗರ: ತಾಲೂಕಿನ ರಾಮಚಂದ್ರಾಪುರ ಮಠದಲ್ಲಿ ಗುರುವಾರ ರಾಮೋತ್ಸವದ ಅಂಗವಾದ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ತೇರು ಎಳೆದು ಧನ್ಯತೆ ಅನುಭವಿಸಿದರು.

ರಾಮನವಮಿ ರಥೋತ್ಸವ ಅಂಗವಾಗಿ ಅಖಂಡ ಭಜನೆ, ಶ್ರೀಮಠದ ಸಪರಿವಾರ ದೇವರುಗಳಿಗೆ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ರಾಮನ ಜನ್ಮ ಜಾತಕದ -Àಲದ ಕುರಿತು ಹಾಗೂ ಆ ಜಾತಕದ ಶ್ರೇಷ್ಠ ತೆ ಕುರಿತು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಮನನ್ನು ಜೀವನ ಶ್ರೇಷ್ಠತೆಗೆ ಆದರ್ಶನಾಗಿ ಜಗತ್ತಿನ ನಾಯಕನಾಗಿ ಬಾಳಿದ ರಾಮನ ಆದರ್ಶಗಳ ಆರಾಧನೆ ನಮ್ಮದಾಗಬೇಕು. ಶಾಸಗಳ ಕುರಿತು ಗೌರವವಿರಬೇಕು. ಹಾಗಾದರೆ ಮಾತ್ರ ನಮ್ಮ ವ್ಯಕ್ತಿತ್ವಕ್ಕೂ ಶ್ರೇಷ್ಠತೆ ಬಂದೀತು ಎಂದು ಹೇಳಿದರು. ಪ್ರಧಾನಮಠ ನಿರ್ವಹಣಾ ಸಮಿತಿ ಅಧ್ಯಕ್ಷ ಸೀತಾರಾಮ ಶಿವಮೊಗ್ಗ, ರಾಮೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಭಾಕರ್, ಅಧ್ಯಕ್ಷ ಜಟ್ಟಿಮನೆ ಗಣಪತಿ ಭಟ್, ಪ್ರಮುಖರಾದ ಆಚಾರ ವಿಚಾರ ಗಜಾನನ ಭಟ್, ರಾಘವೇಂದ್ರ ಮಧ್ಯಸ್ಥ ಸೇರಿದಂತೆ ಶ್ರೀ ಮಠದ ವಿವಿಧ ವಿಭಾಗದ ಪ್ರತಿನಿ„ಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net