ರಾಮಚಂದ್ರಾಪುರ ಮಠ ಧಾರ್ಮಿಕ ವೈಭವದ ಸಂಕೇತ

8sgr2
ಸಾಗರದಲ್ಲಿ ನವರಾತ್ರಿ ನಮಸ್ಯಾ ಸಮಾಜ ಸಂಭ್ರಮ ಕಾರ್ಯಕ್ರಮದ ಸಂಪರ್ಕ ಕೇಂದ್ರವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಪ್ರವೀಣ್ ಭೀಮನಕೋಣೆ, ಸವಿತಾ ವಾಸು, ಹರೀಶ್ ಭಟ್ ಇತರರಿದ್ದರು.
Published on

ಸಾಗರ: ಶ್ರೀ ರಾಮಚಂದ್ರಾಪುರ ಮಠವು ಧಾರ್ಮಿಕ ವೈಭವಕ್ಕೆ ಸಂಕೇತವಾಗಿದೆ. ಈ ವರ್ಷ ನವರಾತ್ರಿ ಉತ್ಸವ ಸಾಗರದಲ್ಲಿ ನಡೆಸುವ ಶ್ರೀಮಠದ ಸಂಕಲ್ಪಕ್ಕೆ ಎಲ್ಲ ರೀತಿ ಸಹಕಾರ ನೀಡಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರದ ಜಗದೀಶ್ ಒಡೆಯರ್ ಮನೆಯಲ್ಲಿ ಶುಕ್ರವಾರ ರಾಮಚಂದ್ರಾಪುರ ಮಠದಿಂದ ನವರಾತ್ರಿ ಅಂಗವಾಗಿ ನಡೆಯಲಿರುವ ನವರಾತ್ರಿ ನಮಸ್ಯಾ ಸಮಾಜ ಸಂಭ್ರಮ ಕಾರ್ಯಕ್ರಮದ ಸಂಪರ್ಕ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಸಾಗರದಲ್ಲಿ ಶ್ರೀಮಠದಿಂದ ನವರಾತ್ರಿ ಉತ್ಸವವನ್ನು ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಸಲು ಉದ್ದೇಶಿಸಿರುವುದು ತುಂಬ ಸಂತೋಷ ತಂದಿದೆ. ಅತ್ಯಂತ ವಿಶೇಷ ರೀತಿಯಲ್ಲಿ ಕಾರ್ಯಕ್ರಮ ನಡೆಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ನವರಾತ್ರ ನಮಸ್ಯಾ ಕಾರ್ಯಕ್ರಮಕ್ಕೆ ಎಲ್ಲ ರೀತಿ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ವಿ.ಪಾಟೀಲ್ ಮಾತನಾಡಿ, ನವರಾತ್ರಿ ಉತ್ಸವ ನಮ್ಮ ಸಂಸ್ಕೃತಿಯ ವಿಶೇಷ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಸಾಗರದಲ್ಲಿ ರಾಮಚಂದ್ರಾಪುರ ಮಠದಿಂದ ನವರಾತ್ರಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ. ಕಾರ್ಯಕ್ರಮದ ಯಶಸ್ಸಿಗೆ ಬೇಕಾದ ಎಲ್ಲ ಸಹಕಾರ ನೀಡುತ್ತೇವೆ ಎಂದರು.

ನಗರಸಭೆ ಉಪಾಧ್ಯಕ್ಷೆ ಸವಿತಾವಾಸು, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಹರೀಶ್ ಭಟ್, ಕೆ.ಜಿ.ಜಗದೀಶ್ ಒಡೆಯರ್, ಹರನಾಥ ರಾವ್, ಪ್ರಸನ್ನ ಕೆರೆಕೈ, ಪ್ರವೀಣ್ ಭೀಮನಕೋಣೆ, ಮುರಳಿ ಗೀಜಗಾರು, ರಮೇಶ್ ಹೆಗಡೆ ಗುಂಡೂಮನೆ, ರುಕ್ಮಾವತಿ ರಾಮಚಂದ್ರ, ಶಿವರಾಮಯ್ಯ, ಶಾಂತಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net