ರಾಮಚಂದ್ರಪ್ಪಗೆ ಎಂಎಲ್‌ಸಿ ಮಾಡಿ

oppo_2
oppo_2
Published on

ಕಲಬುರಗಿ: ರಾಜ್ಯ ವಿಧಾನ ಪರಿಷತ್‌ಗೆ ಖಾಲಿಯಾದ ನಾಲ್ಕು ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಕುರುಬ ಸಮುದಾಯದ ಹಿರಿಯ ಮುಖಂಡ ಕೆ.ಎಂ. ರಾಮಚಂದ್ರಪ್ಪ ಅವರನ್ನು ಕಾಂಗ್ರೆಸ್‌ನಿAದ ನಾಮ ನಿರ್ದೇಶನ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಮನವಿ ಮಾಡಿದರು.

ಕುರುಬರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ೧೩ ವರ್ಷ, ೨೦೧೩ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಶ್ರಮಿಸಿದ್ದರು. ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ ೭೫ನೇ ಜನ್ಮ ದಿನದ ಸಮಾವೇಶದ ರೂವಾರಿಯಾಗಿ ಕಾಂಗ್ರೆಸ್ ಸಂಘಟನೆಗೆ ಬಲತುಂಬಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶೋಷಿತ ಸಮುದಾಯಗಳ ರಾಜ್ಯ ಪ್ರಧಾನ ಸಂಚಾಲಕರಾಗಿ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ಕಾಂಗ್ರೆಸ್ ಗೆಲುವಿಗಾಗಿ ರಾಜ್ಯಾದ್ಯಂತ ಸುತ್ತಾಡಿ, ಕಾಂಗ್ರೆಸ್ ಗೆಲುವಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಸೇವೆ ಪರಿಗಣಿಸಿ ಖಾಲಿ ಇರುವ ನಾಲ್ಕು ವಿಧಾನ ಪರಿಷತ್ ಸ್ಥಾನದಲ್ಲಿ ಒಂದು ಸ್ಥಾನಕ್ಕೆ ರಾಮಚಂದ್ರಪ್ಪ ಅವರನ್ನು ನಾಮನಿರ್ದೇಶನ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ನಿರ್ದೇಶಕ ಈರಣ್ಣ ಝಳಕಿ, ಖಜಾಂಚಿ ರವಿಗೊಂಡ ಕಟ್ಟಿಮನಿ, ಉಪಾಧ್ಯಕ್ಷ ನಾಗೇಂದ್ರಪ್ಪ ಪೂಜಾರಿ, ನಿರ್ದೇಶಕ ಬಾಬು ಪೂಜಾರಿ, ಮಾಜಿ ನಿರ್ದೇಶಕ ಮಹೇಶ ಧರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net