ರಾಮಗಿರಿ ಮಹಾರಾಜ ಮೇಲೆ ಕ್ರಮವಾಗಲಿ

2
Published on

ಕಕ್ಕೇರಿ: ಮುಸ್ಲಿಂ ಸಮುದಾಯದವರು ದೇಶದಲ್ಲಿ ಸೌಹಾರ್ದದಿಂದ ಬಾಳುತ್ತಿದ್ದೇವೆ. ನಮ್ಮಲ್ಲಿ ಬಿರುಕು ಹುಟ್ಟಿಸಲು ಮಹಾರಾಷ್ಟ್ರದ ರಾಮಗಿರಿ ಮಹಾರಾಜರು ಸ್ವಾರ್ಥಕ್ಕೋಸ್ಕರ ಮಹಮ್ಮದ್​ ಪೆಗಂಬರ್​ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ತಣ ಅವರನ್ನು ಬಂಧಿಸಿ ಕಾನೂನು ಕ್ರಮ ಕೆಗೊಳ್ಳಬೇಕೆಂದು ಮೌಲಾನಾ ಅ್ಜಲ್​ ಆಗ್ರಹಿಸಿದರು.

ಪಟ್ಟಣದ ತಹಸೀಲ್ದಾರ್​ ಕಚೇರಿ ಆವರಣದಲ್ಲಿ ರಾಮಗಿರಿ ಮಹಾರಾಜರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಸಮುದಾಯದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್​ ಪ್ರಕಾಶ ಗಾಯಕವಾಡ ಮೂಲಕ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಸೋಮವಾರ ಮನವಿ ಸಲ್ಲಿಸಿ ಮಾತನಾಡಿದರು.

ನಾವು ರಾಮಗಿರಿ ಮಹಾರಾಜರ ಹೇಳಿಕೆ ಖಂಡಿಸುತ್ತೇವೆ. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೆಗೊಳ್ಳುವಂತೆ ಒತ್ತಾಯಿಸಿದರು. ಸಬ್​ ಇನ್​ಸ್ಪೆಕ್ಟರ್​ ಮಂಜುನಾಥ ನಾಯಕ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು. ಮುಖಂಡರಾದ ನಾಸೀರ್​ ಬಾಗವಾನ್​, ರಿಯಾಜ್​ ಪಟೇಲ್​, ಕಾಶೀಂ ಹಟ್ಟಿಹೊಳಿ, ಅಲ್ತ್​ಾ ಬಸರಿಕಟ್ಟಿ, ಬಶೀರ್​ ಮನಿಯಾರ್​, ಅಬ್ದುಲ್​ ಹುದಲಿ, ಸಾಧಿಕ್​ ನಂದಗಡಿ, ಮೌಲಾನಾ ಆರ್​ೀ, ಮೌಲನಾ ಇಮ್ತಿಯಾಜ್​, ಮೌಲಾನಾ ತೌಫಿಕ್​, ಮೌಲನಾ ನವೀದ್​, ಹಾಫಿಜ್​ ಮೆಹಬೂಬ್​ ಸುಭಾನಿ, ಮಕ್ತುಮ್​ ಸಾಹುಕಾರ, ಅಷ್ಪಾಕ್​ ಪಟೇಲ್​, ಗುಡ್ಡು ತೆಕಡಿ, ತೋಹೀದ್​ ಚಾಂದಖಾನವರ, ಇಸಾಕ್​ ಖಾನ್​ ಪಠಾಣ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net