ರಾಮಕೃಷ್ಣ ಹೆಗಡೆ ಜನ್ಮ ದಿನೋತ್ಸವ 29ರಂದು

25sdp4a(Ramakrishna Hegde Doddmane)
Published on

ಮುಂಡಗೋಡ: ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆಯವರ 98ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಆ. 29ರಂದು ನಡೆಸಲಾಗುವುದು ಎಂದು ಚಿರಂತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಓಶಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರ್ಕಾರಿ ಪದವಿಪೂರ್ವ ಕಾಲೇಜ್ ಸಭಾಭವನದಲ್ಲಿ ಆ. 29ರಂದು ಬೆಳಗ್ಗೆ 11.15ಕ್ಕೆ ರಾಮಕೃಷ್ಣ ಹೆಗಡೆಯವರ 98ನೇ ಜನ್ಮದಿನೋತ್ಸವ ಆಚರಿಸಲಾಗುತ್ತಿದೆ. ಶಾಸಕ ಶಿವರಾಮ ಹೆಬ್ಬಾರ, ವಿ.ಎಸ್. ಪಾಟೀಲ, ಬಸವರಾಜ ಓಶಿಮಠ, ತಹಸೀಲ್ದಾರ್ ಶಂಕರ ಗೌಡಿ, ಚಿದಾನಂದ ಹರಿಜನ, ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net