ರಾಮ ಮಂದಿರದ ಹುಂಡಿ ಹಣ ಕಳವು

Published on

ತಿಪಟೂರು: ನಗರದ ಹಳೇಪಾಳ್ಯದ ಗಾಯತ್ರಿ ನಗರದಲ್ಲಿರುವ ಶ್ರೀರಾಮ ಮಂದಿರದ ಹಿಂಬಾಗಿಲ ಬೀಗ ಮುರಿದ ಕಳ್ಳರು ದೇವಲಯದ ಹುಂಡಿ ಕಳ್ಳತನ ಮಾಡಿ ಲಕ್ಷಾಂತರ ಹಣ ದೋಚಿದ್ದಾರೆ. ಶುಕ್ರವಾರ ರಾತ್ರಿ ಹುಂಡಿ ಕದ್ದೊಯ್ದ ಕಳ್ಳರು, ಸಮೀಪದ ಮಾವಿನತೋಪಿಗೆ ಹುಂಡಿ ಒಡೆದು ಹಣ ದೋಚಿ ಹುಂಡಿ ದಬ್ಬಿ ಅಲ್ಲೇ ಬಿಟ್ಟು ಹೋಗಿದ್ದಾರೆ. ಶ್ರೀರಾಮ ಮಂದಿರ ಟ್ರಸ್ಟ್​ನವರು ಪ್ರತಿ ವರ್ಷ ಮೇ ತಿಂಗಳಲ್ಲಿ ಹುಂಡಿ ಎಣಿಕೆ ಮಾಡುತ್ತಿದ್ದರು. ಕಳೆದ ವರ್ಷ ಹುಂಡಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿತ್ತು ಎನ್ನಲಾಗಿದ್ದು, ಇನ್ನೇನು ಹುಂಡಿ ಹಣ ಎಣಿಕೆ ಮಾಡಬೇಕು ಎನ್ನುವಷ್ಟರಲ್ಲಿ ಹುಂಡಿ ಹಣ ಕಳ್ಳತನ ಮಾಡಲಾಗಿದೆ. ಸ್ಥಳಕ್ಕೆ ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net