

ಬಾಗಲಕೋಟೆ: ಜೇವರ್ಗಿ ತಾಲೂಕಿನ ನಿಲೋಗಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಖಾಸಗಿ ಮಿನಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದ ಬಾಗಲಕೋಟೆ ನಗರ ನಿವಾಸಿಗಳ ಅಂತ್ಯಕ್ರಿಯೆ ಶನಿವಾರ ರಾತ್ರಿ ಧಾರ್ಮಿಕ ವಿಽ ವಿದಾನಗಳ ಮೂಲಕ ನೆರವೇರಿತು.
ಅಂಬುಲೆನ್ಸ ಮೂಲಕ ಪಾರ್ಥಿವ ಶರೀರ ನಗರಕ್ಕೆ ಆಗಮಿಸುತ್ತಿದ್ದಂತೆ ಎಲ್ಲರ ಕಣ್ಣಾಲೆಗಳು ತೇವಗೊಂಡವು. ಟೆಂಕಿನಮಠದ ಸಮೀಪ ಆಗಮಿಸುತ್ತಿದ್ದಂತೆ ಸಂಬAಽಕರು, ಸುತ್ತಮುತ್ತಲೀನ ಆಕಂದ್ರನ ಮುಗಿಲು ಮುಟ್ಟಿತ್ತು. ನಂತರ ಪಾರ್ಥಿವ ಶರೀರಗಳನ್ನು ನಗರದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಿ ತಮ್ಮ ತಮ್ಮ ಸಂಪ್ರದಾಯದAತೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಪಾರ್ಥಿವ ಶರೀರ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು. ಮೃತ ಕುಟುಂಬಸ್ಥರು ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಽಕಾರಿ ಜಾನಕಿ ಕೆ.ಎಂ. ಎಸ್ಪಿ ಅಮರನಾಥ ರೆಡ್ಡಿ, ಸಿಇಒ ಶಶಿಧರ ಕುರೇರ ಸೇರಿದಂತೆ ಇತರರು ಇದ್ದರು.