ರಾಣಿಝುರಿ ಪ್ರಪಾತದ ಅಂಚಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್

web 1
Published on

ಬಣಕಲ್: ಸುಂಕಸಾಲೆ ಗ್ರಾಪಂ ಬಲ್ಲಾಳರಾಯನ ದುರ್ಗದ ರಾಣಿಝುರಿ ಪ್ರಪಾತದ ಅಂಚಲ್ಲಿ ಮಂಗಳವಾರ ಸಂಜೆ ಅರಣ್ಯ ಇಲಾಖೆ ಅನುಮತಿ ಪಡೆಯದೆ ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಲಾಗಿದೆ.

ಹಾಸನದ ಹುಡುಗ, ಚಿಕ್ಕಮಗಳೂರಿನ ಹುಡುಗಿ ರಾಣಿಝುರಿಯ ಪ್ರಪಾತದ ಅಪಾಯಕಾರಿ ಅಂಚಿನಲ್ಲಿ ಫ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಿದ್ದಾರೆ. ರಾಣಿಝುರಿ ಪ್ರಪಾತ, ದೇವರಮನೆ, ಚಾರ್ವಡಿಘಾಟ್ ಶ್ರೇಣಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದ್ದು ಅರಣ್ಯದೊಳಗೆ ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಕಡ್ಡಾಯ. ಆದರೆ ಹಾಡುಹಗಲೇ ನಾಲ್ಕೈದು ಜನರ ಗುಂಪು ಪ್ರವೇಶಿಸಿದರೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ.

ಕೆಲ ದಿನಗಳ ಮೈಸೂರಿನಲ್ಲಿ ಪ್ರೀವೆಡ್ಡಿಂಗ್ ಫೋಟೋ ಶೂಟ್ ವೇಳೆ ತೆಪ್ಪ ಮಗುಚಿ ನವಜೋಡಿಗಳು ಮೃತಪಟ್ಟ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net