

ಯಳಂದೂರು: ಯಳಂದೂರು ತಾಲೂಕು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಹಲವಾರು ಕವಿಗಳು ಉದಯಿಸಿದ್ದಾರೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ರಮೇಶ್‌ಗೌಡ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಇಲ್ಲಿನ ಷಡಕ್ಷರದೇವರ ಹೆಸರನ್ನು ನಾಡಗೀತೆಯಲ್ಲಿ ಪ್ರಸ್ತಾಪಿಸಿದ್ದಾರೆ. ಇಂತಹ ಮಹಾನ್ ಕವಿ ಇದ್ದ ಸ್ಥಳ ಇದಾಗಿದೆ. ಅನ್ಯ ಭಾಷಿಕರಿಂದ ನಮ್ಮ ರಾಜ್ಯವನ್ನು ರಕ್ಷಿಸುವ ಕೆಲಸವನ್ನು ಮಾಡಬೇಕಿದೆ. ತಮಿಳುನಾಡು ರಾಜ್ಯದ ಅನೇಕ ಬ್ಯಾಂಕ್‌ಗಳು, ಸಣ್ಣಪುಟ್ಟ ಲೇವಾದೇವಿ ಸಂಸ್ಥೆಗಳು ನಮ್ಮವರ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿದ್ದು, ಇದು ನಿಲ್ಲಬೇಕು. ಇಲ್ಲಿ ಕೆಲಸ ಮಾಡುವರಲ್ಲಿ ಕನ್ನಡಿಗರೇ ಹೆಚ್ಚಾಗಿರಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಶಾಬಾಜ್ ಷರೀಫ್, ರುದ್ರಯ್ಯ, ಡಾ. ಪ್ರೇಮಾ ಅವರನ್ನು ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯರಿಯೂರು ನಾಗೇಂದ್ರ, ಪಪಂ ನಾಮನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಮಾಜಿ ಸದಸ್ಯ ಜೆ. ಶ್ರೀನಿವಾಸ್, ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಮಾತನಾಡಿದರು. ವೇದಿಕೆಯ ಜಿಲ್ಲಾಧ್ಯಕ್ಷ ಯರಗಂಬಳ್ಳಿ ಮಲ್ಲು, ಮಹಿಳಾ ಘಟಕದ ಅಧ್ಯಕ್ಷೆ ರಾಣಿ, ಪಪಂ ಸದಸ್ಯ ಮಹೇಶ್ ಅಶೋಕ್, ಮಹದೇವಶೆಟ್ಟಿ, ಮೋಹನ್, ಕುಮಾರ್, ಕೊಮಾರನಪುರ ಪುಟ್ಟರಾಜು, ಶಿವಮೂರ್ತಿ, ನಿಂಗರಾಜು, ನಂಜುಂಡ, ಮಹದೇವಸ್ವಾಮಿ, ಪ್ರೇಮಲತಾ, ನಳಿನಾಕುಮಾರಿ, ಅಂಬಳೆನವೀನ್, ಕೆಸ್ತೂರು ನಾಗರಾಜು, ದೊಡ್ಡರಾಜು, ನಂಜುಂಡಸ್ವಾಮಿ ಸೇರಿದಂತೆ ಅನೇಕರು ಇದ್ದರು.