

ಚಿತ್ರದುರ್ಗ:ಜಿಲ್ಲೆಯ ವಿವಿಧೆಡೆ ಸೋಮವಾರ ಅಧಿಕ ಮಳೆಯಾಗಿದ್ದು, ಚಳ್ಳಕೆರೆ ತಾಲೂಕು ಮಹದೇವಪುರದಲ್ಲಿ 108.3.ಮೀ. ಮೀ. ಮಳೆ ದಾಖಲಾಗಿದೆ. ಈ ತಾಲೂಕಿನ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಹೊರ ಮಠವೂ ನೀರಿನಿಂದ ಆವೃತ್ತವಾಗಿದೆ. ಸ್ಥಳೀಯ ಠಾಣೆಗೂ ನೀರು ನುಗ್ಗಿದೆ. ಜಗಳೂರು-ನಾಯಕನಹಟ್ಟಿ ಚಳ್ಳಕೆರೆ ರಾಜ್ಯ ಹೆದ್ದಾರಿ 45ರಲ್ಲಿ ಸಂಚಾರ ಬಂದ್ ಆಗಿದೆ.
ಚಿತ್ರದುರ್ಗ ತಾಲೂಕು ಲಕ್ಷ್ಮೀಸಾಗರದ ಸರ್ಕಾರಿ ಶಾಲೆಗೆ ನೀರು ನುಗ್ಗಿದೆ. ಹಲವೆಡೆ ಕೆರೆಕಟ್ಟಿಗಳು ಭರ್ತಿಯಾಗಿ ಕೋಡಿ ಬೀಳುವುದು ಮುಂದುವರಿದಿದೆ. ಜಿಲ್ಲಾಡಳಿತ ಪೂರ್ವ ಮುಂಗಾರು,ಮುಂಗಾರು ಹಾಗೂ ಹಿಂಗಾರು ಮಳೆಯಿಂದ ಆದ ಹಾನಿ ವಿವರನ್ನು ಸೋಮ ವಾರ ಸರ್ಕಾರಕ್ಕೆ ಸಲ್ಲಿಸಿದೆ.