

ಚಿಕ್ಕಮಗಳೂರು: ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರAಟಿ ಯೋಜನೆಗಳು ತಾಲೂಕಿನ ಜನತೆಗೆ ನೆರವು ಒದಗಿಸುವಲ್ಲಿ ಮೂಲಕ ಜೀವನ ಸುಧಾರಣೆಗೆ ಆರ್ಥಿಕ ವರದಾನ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಎಂ.ಮಲ್ಲೇಶಸ್ವಾಮಿ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕತೆಯಿಂದ ಕುಗ್ಗಿದ್ದ ನಾಡಿನ ಜನತೆಗೆ ಸದೃಢ ಜೀವನ ರೂಪಿಸುವ ಸಲುವಾಗಿ ಗ್ಯಾರಂಟಿ ಯೋಜನೆಗಳು ಫಲನೀಡಿವೆ. ಅಲ್ಲದೇ ದೇಶದ ಭವಿಷ್ಯ ರೂಪಿಸುವ ಯುವಕರು ನಿರುದ್ಯೋಗದಿಂದ ಬಳಲದಂತೆ ಯುವನಿಧಿ ಸೌಲಭ್ಯ ಕಲ್ಪಿಸುವ ಮುಖಾಂತರ ಆರ್ಥಿಕವಾಗಿ ಶಕ್ತಿ ತುಂಬಿದೆ ಎಂದರು.
ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ೭೨ ಸಾವಿರ ಅರ್ಜಿದಾರರ ಪೈಕಿ ೬೯,೭೪೪ ಕುಟುಂಬಗಳಿಗೆ ಪ್ರತಿ ತಿಂಗಳು ೧೩ ಕೋಟಿಯಂತೆ ಆರಂಭದಿAದ ಡಿಸೆಂಬರ್ ಅಂತ್ಯದವರೆಗೆ ಒಟ್ಟು ೯೮ ಕೋಟಿ ಹಣವನ್ನು ಖಾತೆಗೆ ಜಮಾಯಿಸಲಾಗಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ತಾಲೂಕಿನ ೮೧,೮೧೮ ಗ್ರಾಹಕರ ಸಂಖ್ಯೆಗೆ ಶೂನ್ಯ ಬಿಲ್‌ಗೊಳಿಸಿ, ಮೂರು ಲಕ್ಷ ಮಂದಿಗೆ ಬೆಳಕನ್ನು ನೀಡಿದ್ದು ಒಟ್ಟು ೫೩ ಕೋಟಿ ಹಣವನ್ನು ಮೆಸ್ಕಾಂ ಇಲಾಖೆಗೆ ಪಾವತಿಸಿದೆ. ಶಕ್ತಿ ಯೋಜನೆಯಡಿ ೧.೬೬ ಕೋಟಿ ಮಹಿಳೆಯರು ಪ್ರಯಾಣಿಸಿದ್ದು ೫೬ ಕೋಟಿ ರೂ.ಗಳನ್ನು ಸಾರಿಗೆ ಇಲಾಖೆಗೆ ಸರ್ಕಾರ ಭರಿಸಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಸುಮಾರು ೭೫ ಸಾವಿರ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ವಿತರಿಸುವ ಜೊತೆಗೆ ೩೫ ಕೋಟಿ ರೂ. ಹಣವನ್ನು ನೇರ ಖಾತೆಗೆ ಜಮಾವಣೆ ಮಾಡಲಾಗಿದೆ. ಯುವನಿಧಿ ಯೋಜನೆಯಲ್ಲಿ ಒಟ್ಟು ೩,೭೭೨ ನಿರುದ್ಯೋಗಿ ಪದವಿ ಹಾಗೂ ಡಿಪ್ಲಮೋ ಪದವೀಧರರಿಗೆ ಒಟ್ಟು ೧ ಕೋಟಿ ಭತ್ಯೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ ಮಾತನಾಡಿ, ರಾಜ್ಯಸರ್ಕಾರದ ಐದು ಗ್ಯಾರಂಟಿಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಂಪೂರ್ಣ ಯಶಸ್ವಿಗೊಂಡಿದೆ. ಕೆಲವು ಸಣ್ಣಪುಟ್ಟ ತಡೆ ತಡೆಗಳು ಹೊರತಾಗಿ ಶೇ.೯೯ ರಷ್ಟು ಪ್ರಗತಿ ಸಾಧಿಸಿದೆ ಎಂದು ವಿವರಿಸಿದರು.
ಸ್ವಾವಲಂಬಿ ಜೀವನ ಕೈಗೊಳ್ಳುವ ಸಲುವಾಗಿ ಸರ್ಕಾರ ಹೆಣ್ಣುಮಕ್ಕಳಿಗೆ ಮೊದಲ ಆದ್ಯತೆ ನೀಡಿ ಸಹಕರಿಸುತ್ತಿದೆ. ಅಲ್ಲದೇ ಕುಟುಂಬದ ಅತ್ಯಂತ ಹೆಚ್ಚು ಜವಾಬ್ದಾರಿ ನಿಭಾಯಿಸುವ ಹೆಣ್ಣು ಎಲ್ಲ ರಂಗದಲ್ಲೂ ಛಾಪು ಮೂಡಿಸಿರುವ ಕಾರಣ ಪಂಚಗ್ಯಾರAಟಿಗಳು ಮಹಿಳಾ ಸಬಲೀಕರಣಕ್ಕೆ ಮುಡುಪಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಓ ವಿಜಯ್‌ಕುಮಾರ್, ಆಡಳಿತಾಧಿಕಾರಿ ಕೊರವರ, ತಾಲೂಕು ಗ್ಯಾರಂಟಿ ಸದಸ್ಯರಾದ ಅನ್ಸರ್‌ಆಲಿ, ರೋಹಿತ್, ತಿಮ್ಮೇಗೌಡ, ಗೌಸ್‌ಮೊಹಿಯುದ್ದೀನ್, ಹಸೆನಾರ್, ಕೃಷ್ಣ, ಜಯಂತಿ, ನಾಗೇಶ್‌ಅರಸ್, ವಿಂದ್ಯಾ ಮತ್ತಿತರರಿದ್ದರು.