

ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ಮುಚ್ಚುವ ಆದೇಶ,ಬಡವರ ಬಗ್ಗೆ ಕನಿಷ್ಠ ಕಾಳಜಿ ಇ ಲ್ಲದ,ಸಂವೇಧನಾ ರಹಿತ ಸರ್ಕಾರವೊಂದು ತೆಗೆದುಕೊಳ್ಳ ಬಹುದಾದ ಮೂರ್ಖತನದ ನಿರ್ಧಾರವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಸಂಪತ್‌ಕುಮಾರ್ ರಾಜ್ಯಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜನೌಷಧ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಬೇಕೆಂಬ ಆದೇಶವನ್ನು ಖಂಡಿಸಿ ಪಕ್ಷದ ಕಾರ‌್ಯಕರ್ತರು ನಗರದ ಜಿಲ್ಲಾಸ್ಪತ್ರೆ ಆವರಣ ದ ಲ್ಲಿ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ದೇಶದ ಜನರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಗಳನ್ನು ಪೂರೈಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ 2008ರಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧ ಯೋಜನೆಯಡಿ ದೇಶಾದ್ಯಂತ ಈ ಕೇಂದ್ರಗಳನ್ನು ಆರಂಭಿಸಲು ಅನುಮೋದನೆ ನೀಡಿದೆ.
ಈಗಾಗಲೇ ದೇಶಾದ್ಯಂತ 16290 ಕೇಂದ್ರಗಳಿದ್ದು, ಕರ್ನಾಟಕದಲ್ಲಿರುವ 1459 ಕೇಂದ್ರಗಳ ಪೈಕಿ 400ಕ್ಕೂ ಹೆಚ್ಚು ಜನರಿಕ್ ಮಳಿ ಗೆಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿವೆ. 2047ಬಗೆಯ ಔಷಧ ಹಾಗೂ 300ಕ್ಕೂ ಹೆಚ್ಚು ಸರ್ಜಿಕಲ್ ಐಟಂಗಳು ರೋಗಿಗಳಿಗೆ ಅತ್ಯಂತ ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದ್ದು,ರಾಜ್ಯಸರ್ಕಾರ ತನ್ನ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಔಷಧಗಳು ಲಭ್ಯವಾಗುತ್ತಿವೆಯೇ ಮೊದಲು ಖಚಿತ ಪಡಿಸಿಕೊಳ್ಳಲಿ ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಹೇಳಿಕೆಗೆ ತಿರುಗೇಟು ನೀಡಿದರು.
ಪಕ್ಷದ ಖಂಜಾಚಿಯಾದ ಮಾಧುರಿಗೀರೀಶ್ ಮಾತನಾಡಿ,ಜನೌಷಧ ಕೇಂದ್ರಗಳನ್ನು ಮುಚ್ಚುವುದರ ಜತೆಗೆ ಹೊಸದಾದ 31ಕ್ಕೂ ಹೆ ಚ್ಚು ಪ್ರಸ್ತಾವನೆಗಳನ್ನು ತಿರಸ್ಕರಿಸಿರುವ ರಾಜ್ಯಸರ್ಕಾರದ ನಿರ್ಧಾರದಿಂದ ಜನರಿಗೆ ಘೋರ ಅನ್ಯಾಯವಾಗಲಿದೆ. ಕಳೆದ 10 ವರ್ಷಗಳಲ್ಲಿ ದೇಶದ ಬಡಜನರಿಗೆ ಅಂದಾಜು 30 ಸಾವಿರ ಕೋಟಿ ರೂ. ಔಷಧ ಖರೀದಿಯಲ್ಲಿ ಉಳಿತಾಯವಾದಂತಾಗಿದೆ ಎಂದರು.
ಪಕ್ಷದ ರಾಜ್ಯರೈತ ಮೋರ್ಚಾ ಕಾರ‌್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ,ಖಾಸಗಿ ಔಷಧ ಸಂಸ್ಥೆಗಳ ಲಾಬಿಗೆ ಮಣಿದಿರುವ ಕಾಂಗ್ರೆಸ್ ಬಡವರಿಗೆ ಅನ್ಯಾಯ ಮಾಡಲು ಹೊರಟಿದೆ. ರಾಜಕೀಯ ದುರುದ್ದೇಶದ ಈ ತೀರ್ಮಾನ ಬಡ ರೋಗಿಗಳಿಗೆ ಮಾರಕವಾಗಿದೆ. ಈಗಿ ರುವ ಕೇಂದ್ರಗಳನ್ನು ಉಳಿಸಿಕೊಂಡು,ಹೊಸದಾಗಿ ಮತ್ತಷ್ಟು ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸುವಂತೆ ರಾಜ್ಯಸರ್ಕಾರವನ್ನು ಒತ್ತಾ ಯಿಸಿದರು.
ಲೋಕೇಶ್,ನಾಗರಾಜ್,ಶೈಲಜಾರೆಡ್ಡಿ,ನಾಗರಾಜ್‌ಬೇದ್ರೆ,ಛಲವಾದಿ ತಿಪ್ಪೇಸ್ವಾಮಿ,ನವೀನ್‌ಚಾಲುಕ್ಯ,ಬಸಮ್ಮ,ಶಾಂತಮ್ಮ, ಮಂಜು ಳಮ್ಮ,ವೀಣಾ,ಕಿರಣ್,ಶಂಭು,ನಾಗರಾಜ,ಭರತ್,ವಿರೂಪಾಕ್ಷಪ್ಪ,ಬಸವರಾಜಪ್ಪ ಹುಲ್ಲೂರು, ಸುಮಾ,ಅರುಣಾ, ಗಾಯತ್ರಿದೇವಿ ಇತರರು ಪ್ರತಿಭಟನೆಯಲ್ಲಿ ಇದ್ದರು.