ರಾಜ್ಯಮಟ್ಟದ ವಿಚಾರ ಸಂಕಿರಣ 9ರಂದು

mariyappa halli
Published on

ಕಲಬುರಗಿ: `ಒಂದು ದೇಶ ಒಂದು ಚುನಾವಣೆ ನಿರಂಕುಶ ಪ್ರಜಾಪ್ರಭುತ್ವದತ್ತ ಭಾರತ' ವಿಷಯದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ದಲಿತ ಸಂಘರ್ಷ ಸಮಿತಿಯಿಂದ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಮೆಮೋರಿಯಲ್ ಹಾಲ್‌ನಲ್ಲಿ ಅ.9ರಂದು ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.
ಭಾರತ ವೈವಿಧ್ಯತೆಯ ದೇಶವಾಗಿದೆ. ಪ್ರಾದೇಶಿಕ ಪಕ್ಷಗಳಿವೆ. ಭಿನ್ನ ವಿಭಿನ್ನ ಭಾಷೆ, ಸಂಸ್ಕೃತಿಗಳಿವೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರವೂ ಒಂದು ದೇಶ, ಒಂದು ಸಂಸ್ಕೃತಿ, ಒಂದು ಭಾಷೆ, ಒಂದು ಪಕ್ಷ, ಒಬ್ಬ ನಾಯಕ ಒಂದೇ ಚುನಾವಣೆಯ ಹಾದಿ ಹಿಡಯುತ್ತಿದ್ದು, ಇದು ದೇಶದ ಏಕತೆಯ ಸೂಚಕವಾಗಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಾದೇಶಿಕ ಪಕ್ಷಗಳನ್ನು ಮೂಲೆ ಗುಂಪು ಮಾಡುವ ಪ್ರಯತ್ನವಾಗಿದ್ದು, ಇರಿಂದ ಸ್ಥಳೀಯ ವಿಚಾರ, ಸಮಸ್ಯೆಗಳು ಗೌಣವಾಗುತ್ತವೆ. ಸ್ಥಿರ ಸರ್ಕಾರ ನೀಡಲು ವಿಫಲವಾದಾಗ ಜನಾದೇಶಕ್ಕೆ ಹೋಗುವುದು ಪ್ರಜಾತಂತ್ರದ ಅತಿದೊಡ್ಡ ಶಕ್ತಿ. ಆದ್ದರಿಂದ ಒಂದು ದೇಶ ಒಂದು ಚುನಾವಣೆ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡಿದ್ದು, ನ್ಯಾಯಮೂರ್ತಿ ನಾಗಮೋಹನ ದಾಸ ಉದ್ಘಾಟಿಸಲಿದ್ದು, ಗುರುಪ್ರಸಾದ ಕೆರಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಅಂಕಣಕಾರ ಎ.ನಾರಾಯಣ ವಿಷಯ ಮಂಡಿಸಲಿದ್ದಾರೆ. ಮರಿಯಪ್ಪ ಹಳ್ಳಿ, ಇಂದುಧರ ಹೊನ್ನಾಪುರ, ಎನ್‌ವೆಂಕಟೇಶ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯಿಂದ ೧೦೦ಜನ ಭಾಗವಹಿಸಲಿz್ದೆÃವೆ ಎಂದು ಹೇಳಿದರು.
ಮರೆಪ್ಪ ಮೇತ್ರೆ, ಶಿವಶರಣಪ್ಪ ವರನಳ್ಳಿ, ಸಂತೋಷ ತೆಗನೂರ, ಮಲ್ಲಿಕಾರ್ಜುನ ಹಳ್ಳಿ, ಮಲ್ಲಿಕಾರ್ಜುನ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net