

ಕಲಬುರಗಿ: ನಗರದ ಹೊರವಲಯದ ಸ್ವಾಮಿನಾರಾಯಣ ಅಂತಾರಾಷ್ಟಿçÃಯ ಶಾಲೆಯಲ್ಲಿ ಸಿಬಿಎಸ್‌ಇ ಕ್ಲಸ್ಟರ್ ರಾಜ್ಯಮಟ್ಟದ ವಾಲಿಬಾಲ್ ಸ್ಪರ್ಧೆಯೂ ಶುಕ್ರವಾರ ಆರಂಭವಾಗಿದ್ದು, ಸೆ.೨೨ರವರೆಗೆ ನಡೆಯಲಿವೆ ಎಂದು ಶಾಲೆಯ ಪ್ರಾಂಶುಪಾಲ ಇ.ಜಿ.ದೀಕ್ಷಿತ್ ಹೇಳಿದರು. ರಾಜ್ಯದ ೨೯೦ ಶಾಲೆಗಳ ೬೦೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ವಾಲಿಬಾಲ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿವೆ. ೧೯. ೧೭, ೧೪ ವರ್ಷದೊಳಗಿನ ವಿಭಾಗಗಳಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ೧೯ ವರ್ಷದೊಳಗಿನ ೬೫ ತಂಡ, ೧೭ ವರ್ಷದ ೨೧೯ ತಂಡ, ೧೪ ವರ್ಷದೊಳಗಿನ ೧೮೪ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿವೆ. ಮಹಿಳಾ ಕ್ರೀಡಾಪಟುಗಳಿಗೆ ಸ್ವಾಮಿನಾರಾಯಣ ಶಾಲೆಯಲ್ಲಿ, ಯುವಕರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು. ಆಡಳಿತಾಧಿಕಾರಿ ಸಚಿನ್, ನಿರ್ದೇಶಕ ಜಯೇಶ ವರು ಇದ್ದರು.