

ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಭರಮಸಾಗರ ಶಿಶು ಅಭಿವೃದ್ಧಿ ಯೋಜನೆ ಹುಣಸೇಕಟ್ಟೆ-ಬಿ ಕೇಂದ್ರದ ಅಂಗನವಾಡಿ ಕಾರ‌್ಯಕರ್ತೆ ಎಂ.ಬಿ. ಭಾರತಮ್ಮ ಅತ್ಯುತ್ತಮ ಅಂಗನವಾಡಿ ಕಾರ‌್ಯಕರ್ತೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೊಸದುರ್ಗ ತಾಲೂಕು ಜಾನಕಲ್ ಶ್ರೀ ಪಾರ್ವತಿ ಸ್ತ್ರೀ ಶಕ್ತಿ ಗುಂಪು ಅತ್ಯುತ್ತಮ ಸ್ತ್ರೀಶಕ್ತಿ ಗುಂಪು ಪ್ರಶಸ್ತಿಗೆ ಆಯ್ಕೆಯಾಗಿದೆ. ಬೆಂಗಳೂರಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರು ಭಾರತಮ್ಮ ಹಾಗೂ ಶ್ರೀ ಪಾರ್ವತಿ ಸ್ತ್ರಿ ಶಕ್ತಿ ಗುಂಪಿನ ಪ್ರತಿನಿಧಿ ಜಿ.ಎಸ್.ನೀಲಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.