

ಮೈಸೂರು: ಎಟಿಎಂಇ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗವು ಡಿಪಾರ್ಟ್‌ಮೆಂಟ್ ಅಸೋಸಿಯೇಷನ್ ಕ್ವಾಂಟಮ್ ಸಹಯೋಗದಲ್ಲಿ ಶುಕ್ರವಾರ ರಾಜ್ಯಮಟ್ಟದ ತಾಂತ್ರಿಕ ಉತ್ಸವ ‘ಆವಾಗಮ-2023’ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಲು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ಸ್ಟ್ರೀಮ್‌ನಲ್ಲಿ ಇತ್ತೀಚಿನ ಸಂಶೋಧನೆ ಮತ್ತು ಆವಿಷ್ಕಾರಗಳ ಬಗ್ಗೆ ಜಾಗೃತಿ ಮೂಡಿಸಲು ಇದು ಒಂದು ವೇದಿಕೆಯಾಗಿತ್ತು.
ಮೈಸೂರಿನ ವಿವಿಐಇಟಿಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎನ್.ಶಾಮಲಾ, ಎನ್‌ಐಇಟಿಯ ಸಹಾಯಕ ಪ್ರಾಧ್ಯಾಪಕಕ ಡಾ.ಎನ್. ಲೋಕೇಶ್, ಎಟಿಎಂಇಸಿಇನ ಆರ್.ಶ್ರೀಶಯನ, ಡಾ.ಪ್ರಕಾಶ್‌ಕುರವತ್ತಿ ಅವರು ತೀರ್ಪುಗಾರರಾಗಿದ್ದರು. ಉತ್ಸವದ ಭಾಗವಾಗಿ ತಾಂತ್ರಿಕ ಪ್ರಾಜೆಕ್ಟ್ ಎಕ್ಸ್‌ಪೋವನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ನಡೆಸಲಾಯಿತು. ಇದರಲ್ಲಿ ರಾಜ್ಯದ ವಿವಿಧ ಭಾಗಗಳ ಕ್ಯಾಪ್‌ಸ್ಟೋನ್ ಯೋಜನೆಗಳನ್ನು ಪ್ರದರ್ಶಿಸಲಾಯಿತು.
ಬಹುಮಾನ ವಿಜೇತರು: ಆಫ್‌ಲೈನ್ ಸ್ಪರ್ಧೆಯಲ್ಲಿ ಮೈಸೂರಿನ ಜೆಎನ್‌ಎಸ್‌ಎಸ್‌ಟಿಯುನ ಎಸ್.ಚಂದ್ರಮೋಹನ್, ತೃಪ್ತಿ ಇ. ಗೌಡ, ವೈಭವ್ ಸುರೇಂದ್ರ, ಎಂ.ಯಶಸ್ ಮತ್ತು ಡಿ.ಆರ್.ರಘುನಂದನ್ ವಿಭಾಗದವರು ಪ್ರಸ್ತುತಪಡಿಸಿದ ಯುಪಿಕ್ಯೂಸಿ ಬಳಸಿ ವೋಲ್ಟೇಜ್ ಸ್ಯಾಗ್ ಸ್ವೆಲ್ ಮತ್ತು ಹಾರ್ಮೋನಿಕ್ಸ್ ಅನ್ನು ಕಡಿತಗೊಳಿಸುವುದು ಎಂಬ ಯೋಜನೆಯು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ವಿವಿಐಇಟಿಯ ಕೆ. ಕುಮಾರ್‌ಗೌಡ ಮತ್ತು ಅಬ್ದುಲ್ಲಾ ಡ್ಯಾನಿಶ್ ಅವರು ಪ್ರಸ್ತುತ ಪಡಿಸಿದ ಎಲೆಕ್ಟ್ರಿಕಲ್ ವೆಹಿಕಲ್ ಮಿತ್ರ ಎರಡನೇ ಸ್ಥಾನ , ಎಟಿಎಂಇಸಿಇ ವಿದ್ಯಾರ್ಥಿಗಳಾದ ಎಂ. ಮೇಘನಾ, ಎಸ್.ಜೀವನ್, ಎಸ್.ಶಶಾಂಕ್ ಮತ್ತು ಪ್ರಸನ್ನ ಪ್ರಸ್ತುತ ಪಡಿಸಿದ ಪೋರ್ಟಬಲ್ ವೆಂಟಿಲೇಟರ್ ಫಾರ್ ಕ್ರಿಟಿಕಲ್ ಹೆಲ್ತ್‌ಕೇರ್ ಅಪ್ಲಿಕೇಶನ್ ತೃತೀಯ ಮತ್ತು ವಿವಿಐಇಟಿ ಇಇಇ ವಿಭಾಗದ ಎಂ. ಚರಣ್ ಎಸ್. ಶಾರದ , ಪಿ.ಸುಮನ್ ಮತ್ತು ಇ.ಎಸ್. ಯಶಸ್ ಪ್ರಸ್ತುತ ಪಡಿಸಿದ ಅಕ್ವಾ ಕ್ವಾಲಿಟಿ ಸರ್ವೆಲೆನ್ಸ್ ಬೋಟ್ ಸಮಾಧಾನಕರ ಬಹುಮಾನ ಪಡೆದಿದೆ.
ಆನ್‌ಲೈನ್ ಸ್ಪರ್ಧೆಯಲ್ಲಿನ ಬೆಂಗಳೂರಿನ ಡಿಬಿಐಟಿಯ ವಿ.ರಾಕೇಶ್, ಬಿ.ಶ್ರೀಧರ್, ಎಂ. ಕೌಸ್ತುಭಾ ಮತ್ತು ಆರ್.ರೋಹನ್‌ಗೌಡ ಪ್ರಸ್ತುತಪಡಿಸಿದ ಗ್ರಾಮೀಣ ಅಪ್ಲಿಕೇಶನ್‌ಗಾಗಿ ಕಡಿಮೆ ವೆಚ್ಚದ ಇರಿಕ್ಷಾ ಎಂಬ ಯೋಜನೆಯು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಗೃಹೋಪಯೋಗಿ ಉಪಕರಣಗಳನ್ನು ನಿಯಂತ್ರಿಸಲು ಮತ್ತು ಅದರ ಶಕ್ತಿಯ ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಐಒಟಿ ಆಧಾರಿತ ವ್ಯವಸ್ಥೆ ಪ್ರಸ್ತುತ ಪಡಿಸಿದ ಬಳ್ಳಾರಿಯ ಬಿಐಟಿಎಂನ ಎಂ.ಡಿ ಮೊಹಸೀನ್, ಎಸ್.ಮೊಹಮ್ಮದ್ ಸೊಹೈಲ್, ಪಿ. ರುಶ್ಮಿತಾ ಸಾಯಿ ಮತ್ತು ಇ.ಪೆಶುಮಾಮ್ ಅವರು ದ್ವಿತೀಯ ಬಹಮಾನ ಪಡೆದುಕೊಂಡರು.
ಡ್ರಗ್ಸ್ ವಿತರಣೆ, ನೈರ್ಮಲೀಕರಣ ಮತ್ತು ವಿವಿಧ ಉದ್ದೇಶಗಳಿಗಾಗಿ ಡ್ರೋನ್ ಮತ್ತು ಕೋವಿಡ್-19 ಜಾಗೃತಿ ಯೋಜನೆ ತಯಾರಿಸಿದ ಮಂಡ್ಯ ಜಿಲ್ಲೆ ಭಾರತೀನಗರದ ಜಿಎಂಐಟಿಯ ಎಂ.ಎಸ್.ಶಿವರಾಜ್, ಬಿ. ವರ್ಷಿತಾ, ಎನ್.ರೋಜಾ ಅವರು, ಮೂರನೇ ಸ್ಥಾನ ಪಡದುಕೊಂಡರು.
ಬೆಂಗಳೂರಿನ ಎನ್‌ಎಂಐಟಿಯ ಕೆ,ಬಿ ಪವನ್, ಎನ್. ಅಪರ್ಣಾ, ಕೆ.ಭೌಮಿಕ್ ಅವರು ಪ್ರಸ್ತುತಪಡಿಸಿದ ರಿಯಲ್ ಟೈಮ್ ಫೇಸ್ ಮಾಸ್ಕ್ ಡಿಟೆಕ್ಷನ್ ಮತ್ತು ಮಾನಿಟರಿಂಗ್ ಸಿಸ್ಟಮ್ ಆರ್‌ಎಫ್‌ಎಂಡಿಎಂ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ ಎಲ್,ಪಾರ್ಥಸಾರಥಿ, ಪ್ರಾಧ್ಯಾಪಕರಾದ ಪ್ರವೀಣ್ ಕುಮಾರ್, ಆರ್.ಶ್ರೀಶಯನ ಇತರರು ಇದ್ದರು.