ರಾಜ್ಯಮಟ್ಟದ ಕವನ ಸ್ಪರ್ಧೆ, ಸಣ್ಣಕಥಾ ಸ್ಪರ್ಧೆ ಫಲಿತಾಂಶ ಪ್ರಕಟ

Published on

ಮೈಸೂರು: ನಗರದ ಸಮತಾ ಅಧ್ಯಯನ ಕೇಂದ್ರವು ಸಂಸ್ಥಾಪಕ ಅಧ್ಯಕ್ಷೆ ಡಾ.ವಿಜಯಾದಬ್ಬೆ ನೆನಪಿನಲ್ಲಿ ವಿದ್ಯಾರ್ಥಿ, ಯುವಜನರಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆ ಮತ್ತು ಕಿರಿಯ ಲೇಖಕಿಯರಿಗೆ ಆಯೋಜಿಸಿದ್ದ ಸಣ್ಣಕಥಾ ಸ್ಪರ್ಧೆ-2025ರ ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಕವನ ಸ್ಪರ್ಧೆ ವಿಜೇತರು:

20ರಿಂದ 35 ವಯೋಮಾನದ ವಿದ್ಯಾರ್ಥಿ, ಯುವಜನರಿಗೆ ಆಯೋಜಿಸಿದ್ದ ಕವನ ಸ್ಪರ್ಧೆಯಲ್ಲಿ ಕೆಜಿಎಫ್‌ನ ಆರ್.ಬಾಲಾಜಿ ಅವರ ‘ಎಂಟರ ಮನೆಯೊಳಗೆ ಕುಂಟೆ ಬಿಲ್ಲೆಯ ಆಟ’ (ಪ್ರಥಮ), ಕೇರಳ ಕೇಂದ್ರೀಯ ವಿವಿಯ ಜೋತಿರ್ಲಕ್ಷ್ಮೀ ಅವರ ‘ಫಿಂಗರ್ ಪ್ರಿಂಟಿನಲ್ಲಿ ಅವಳ ವಿಶ್ವರೂಪ’ ಮತ್ತು ಬಂಟ್ವಾಳದ ಜಯಶ್ರೀ ಇಡ್ಕಿದು ಅವರ ‘ಬಾಡಿಗೆ ಕೋಣೆ’ (ಇಬ್ಬರಿಗೂ ದ್ವಿತೀಯ), ಕೊಳ್ಳೇಗಾಲ ಚಿನ್ನಿಪುರದ ರಶ್ಮಿ ಎಸ್.ನಾಯಕ್ ಅವರ ‘ಹೆಣ್ತನ ಶಾಪವೇ’ (ತೃತೀಯ) ಕವನಗಳು ಮೊದಲ ಮೂರು ಬಹುಮಾನ ಪಡೆದಿವೆ.

ಸೌಮ್ಯಾಶ್ರೀ ನಿಕ್ಕಮ್ (ದಾವಣಗೆರೆ), ವಿದ್ಯಾ ದೇವಾಡಿಗ (ಬೆಂಗಳೂರು), ಶ್ರೀವಿದ್ಯಾ (ಕಲ್ಕುಣಿಕೆ, ಹುಣಸೂರು), ಪಲ್ಲವಿ ಎಡೆಯೂರು ( ಬೆಂಗಳೂರು), ಬಿ.ಪಿ.ಸಂತೋಷಕುಮಾರ್ (ದಾವಣಗೆರೆ), ಯು.ನಂದಿನಿ (ಉರಗನಹಳ್ಳಿ, ಸೊರಬ), ಮೇಘಾ ರಾಮದಾಸ್ (ಗುಳಿಗೆಯನಹಳ್ಳಿ, ಶಿರಾ), ಸಂಜನಾ ಸಿ.ಯಂಭತ್ನಾಳ (ಬೆಳಗಾವಿ), ಎಸ್.ಜ್ಯೋತಿ (ಯಳಂದೂರು), ಸಿದ್ದಾರೂಢ ಸಂ ಗುಗ್ಗರಿ (ಬೆಳಗಾವಿ), ಡಾ.ಭವ್ಯಾ ಅಶೋಕ್ ಸಂಪಗಾರ(ಬೆಳಗಾವಿ), ಡಾ.ಪರ್ವೀನ್ ಬೇಗಮ್ (ಗಂಗಾವತಿ), ಎಂ.ಎನ್.ಯಶಸ್ವಿನಿ (ಪಡುವಾರ ಹಳ್ಳಿ, ಮೈಸೂರು) ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ಸ್ಪರ್ಧೆಗೆ 39 ಪ್ರವೇಶಗಳು ಬಂದಿದ್ದವು. ಡಾ. ಆರ್.ಸುನಂದಮ್ಮ, ಡಾ.ಬಿ.ಆರ್. ಗಣೇಶ್ ಮತ್ತು ಡಾ.ಸೆಲ್ವಕುಮಾರಿ ತೀರ್ಪುಗಾರರಾಗಿದ್ದರು.

ಕಥಾ ಸ್ಪರ್ಧೆ ವಿಜೇತರು:

20ರಿಂದ 40 ವಯೋಮಾನದ ಲೇಖಕಿಯರಿಗೆ ಏರ್ಪಡಿಸಿದ್ದ ಸಣ್ಣಕಥಾ ಸ್ಪರ್ಧೆಯಲ್ಲಿ ಬೆಂಗಳೂರಿನ ಪಲ್ಲವಿ ಎಡೆಯೂರು ಅವರ ‘ಯುರೋಪ್ಲೊಮೆಟ್ರಿ’(ಪ್ರಥಮ ), ರಾಮನಗರದ ಕೆ.ಆರ್.ವಿನುತಾ ಅವರ ‘ತಾಯಿ ಅಂದರೆ’ (ದ್ವಿತೀಯ )ಮತ್ತು ಮಾಲೂರಿನ ಡಾ.ಎಸ್. ಶಿಲ್ಪಾ ಅವರ ‘ಬಾಯಿ ಬಣ್ಣ’ (ತೃತೀಯ) ಮೊದಲ ಮೂರು ಬಹುಮಾನ ಪಡೆದಿವೆ.

ಅಕ್ಷತಾರಾಜ್ (ಪೆರ್ಲ, ಕಾಸರಗೋಡು), ಅಚಲಾ ಬಿ.ಹೆನ್ಲಿ ( ಬೆಂಗಳೂರು), ರಂಜಿತಾ ವಿ. ಮಹಾಜನ್ (ಬೆಳಗಾವಿ), ಎಂ.ತೇಜಶ್ರೀ(ಉಜಿರೆ, ದಕ್ಷಿಣ ಕನ್ನಡ), ಫೌಜ್ಹಿಯಾ ಸಲೀಂ( ಗುರುಪುರ, ಮಂಗಳೂರು), ಡಾ.ಭವ್ಯಾ ಅಶೋಕ್ ಸಂಪಗಾರ (ಬೆಳಗಾವಿ), ಎಂ.ಸಿಂಧು (ಮೈಸೂರು), ಯು.ನಂದಿನಿ (ಉರಗನಹಳ್ಳಿ, ಸೊರಬ), ಕೆ.ಪಿ.ಗುಣವತಿ.(ಹಳೇ ಕಿರಂಗೂರು, ಶ್ರೀರಂಗಪಟ್ಟಣ), ಯು.ಕೆ.ಭೂಮಿಕಾ( ತುಪ್ಪೂರು, ಶಿವಮೊಗ್ಗ) ಅವರ ಕಥೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಸ್ಪರ್ಧೆಗೆ 30 ಪ್ರವೇಶಗಳು ಬಂದಿದ್ದವು. ಡಾ.ಎಚ್.ಎಂ.ಕಲಾಶ್ರೀ, ಡಾ. ಚಂದ್ರಮತಿ ಸೋಂದಾ ಮತ್ತು ಡಾ. ಆನಂದಗೋಪಾಲ ತೀರ್ಪುಗಾರರಾಗಿದ್ದರು.

ಮೊದಲ ಮೂರು ಬಹುಮಾನ ಪಡೆದವರು ಮತ್ತು ತೀರ್ಪುಗಾರರ ಮೆಚ್ಚುಗೆ ಪಡೆದ ಎಲ್ಲರಿಗೆ ಮೇ 31ರಂದು ಮೈಸೂರಿನಲ್ಲಿ ಸಾಹಿತ್ಯ ಕಮ್ಮಟವನ್ನು ಏರ್ಪಡಿಸಲಾಗಿದೆ. ಮರುದಿನ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net