

ಬಾಗಲಕೋಟೆ: ಹುನಗುಂದ ಪಟ್ಟಣದ ವಿ.ಎಂ.ಕೆ. ಎಸ್.ಆರ್.ವಸöದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ವರುಣ ಮುರಗೇಂದ್ರ ಅಥಣಿಮಠ ರಾಜ್ಯಮಟ್ಟದ ದ್ವಿತೀಯ ಸ್ಥಾನ ಪಡೆದು ಮಹಾವಿದ್ಯಾಲಯದ ಕೀರ್ತಿ ತಂದಿದ್ದಾನೆ.
ಮೈಸೂರ ದಸರಾ ಹಿನ್ನಲೆಯಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕ್ರೀಡಾ ಪ್ರಾಽಕಾರ, ದಸರಾ ಕ್ರೀಡಾ ಉಪ ಸಮಿತಿ ಹಮ್ಮಿಕೊಂಡಿದ್ದ ಸಿಎಂ ಕಪ್ ೨೦೨೫ - ಪುರುಷರ ವಿಭಾಗದ ೯೭ ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿ ಸಾಧನೆಗೆ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚಿರಂತಿಮಠ, ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ, ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಚಾರ್ಯ ಡಾ. ಎಸ್.ಆರ್. ಗೋಲಗೊಂಡ, ದೈಹಿಕ ಶಿಕ್ಷಣ ನಿರ್ದೇಶಕ ಲೆಪ್ಟಿನೆಂಟ್ ಎಸ್.ಬಿ ಚಳಗೇರಿ ಹರ್ಷ ವ್ಯಕ್ತಪಡಿಸಿದ್ದಾರೆ.