

ಬಾಗಲಕೋಟೆ: ನಗರದ ಬಿ. ವ್ಹಿ.ವ್ಹಿ. ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ ರೇಂಜರ್ ವಿದ್ಯಾರ್ಥಿಗಳಾದ ಕು. ಜ್ಯೋತಿ ಅಮ್ಮಣ್ಣವರ್ ಹಾಗೂ ಕು. ಮಧು ಹಿರೇಲಿಂಗಣ್ಣವರ್ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಪಾಲರಿಂದ ಕೊಡಮಾಡುವ ೨೦೨೨-೨೩ ನೇ ಸಾಲಿನ ಭಾರತ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.