

ಯಾದಗಿರಿ: ಮುಡಾ ಹಗರಣಕ್ಕೆ ಸಂಬAಧಿಸಿದAತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಲ್ಲಣ್ಣ ಐಕೂರ್ ನೇತೃತ್ವದಲ್ಲಿ ನೂರಾರು ಜನರು ಶನಿವಾರ ಮಧ್ಯಾಹ್ನ 2ಕ್ಕೆ ನಗರದ ನೇತಾಜಿ ಸರ್ಕಲ್ ಬಳಿ ದಿಢೀರ್ ಪ್ರತಿಭಟನೆ ನಡೆಸಿದರು.
ಸರ್ಕಲ್ ಸುತ್ತುವರಿದ ಪ್ರತಿಭಟನಾಕಾರರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದ್ದಲ್ಲದೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಜನಪರ ಕೆಲಸ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಬಿಜೆಪಿ-ಜೆಡಿಎಸ್ ಕೈಗೊಂಬೆಯAತೆ ರಾಜ್ಯಪಾಲರು ವರ್ತಿಸುತ್ತಿರುವುದು ಸರಿಯಲ್ಲ. ಇತ್ತೀಚೆಗೆ ಅಧಿವೇಶನದಲ್ಲಿ ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆಂದು ಹೇಳಿದ್ದ ರಾಜ್ಯಪಾಲರು ಈಗ ಪ್ರಧಾನಿ ಮೋದಿ, ಗೃಹ ಸಚಿವ ಷಾ ಮಾತು ಕೇಳಿ ಹೀಗೆ ಮಾಡಿದ್ದಾರೆ ಎಂದು ಹರಿಹಾಯ್ದರು.
ಮುಖಂಡರಾದ ಹೊನ್ನಪ್ಪ ಮುಷ್ಟೂರ, ಶಂಕೇಶ್ವರ ಗೌಡ, ಮರಿಲಿಂಗಪ್ಪ ಕುನ್ನೂರ, ಮಲ್ಲಕಾರ್ಜುನ, ಸಾಬಣ್ಣಾ ಕೆಂಗೋರಿ, ಮರಿಯಪ್ಪ ಬಿಳ್ವಾರ, ಹೊನ್ನಪ್ಪ ಹಡಿಹಳ್ಳಿ, ಮಲ್ಲಯ್ಯ, ಚಂದ್ರಶೇಖರ ಅಲಿಪುರ, ಬೀರೇಶ್, ಶಿವು ಬಿಲಗುಂದಿ, ಮಹಾಲಿಂಗಪ್ಪ ಇತರರು ಪಾಲ್ಗೊಂಡಿದ್ದರು.