ರಾಜ್ಯದಲ್ಲೂ ನಾವೇ ಅಕಾರಕ್ಕೆ ಬರುತ್ತೇವೆ

BJP
Published on


ಯಾದಗಿರಿ: ಗುಜರಾತ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಸಿದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ನೇತೃತ್ವದಲ್ಲಿ ವಿಜಯೋತ್ಸವ ಆಚರಣೆ ಮಾಡಲಾಯಿತು.

ಇಲ್ಲಿನ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು. ಈ ವೇಳೆ ಮಾತನಾಡಿದ ಡಾ.ನಾಯ್ಕಲ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳಿಗೆ ಗುಜರಾತ್ ಮತದಾರ ಬಹುಪರಾಕ್ ಎಂದಿದ್ದಾನೆ. ಸುದೀರ್ಘ ಮೂರುವರೆ ದಶಕದಿಂದ ಬಿಜೆಪಿ ಗುಜರಾತ್ ಗದ್ದುಗೆ ಹಿಡಿಯುತ್ತಿರುವುದು ಅಭಿವೃದ್ಧಿ ಕಾರ್ಯಗಳಿಂದ ಎಂದರು ಬಣ್ಣಿಸಿದರು.

ಮೋದಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತ್ ರಾಜ್ಯವನ್ನು ಅಭಿವೃದ್ಧಿಯಲ್ಲಿ ನಂ.1 ಆಗಿಸಿದ್ದಾರೆ. ನೀರಾವರಿ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ದೇಶದಲ್ಲಿ ಸಧ್ಯ ಬಿಜೆಪಿ ಅಲೆ ಇದೆ. 2023ರ ಚುನಾವಣೆಯಲ್ಲಿ ರಾಜ್ಯದಲ್ಲೂ ಸಹ ನಮ್ಮ ಪಕ್ಷ ಅಕಾರಕ್ಕೆ ಬರುವುದು ನಿಶ್ವಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಡಾ.ವಿರಬಸವಂತರಡ್ಡಿ ಮುದ್ನಾಳ್, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ,ಯುಡಾ ಅಧ್ಯಕ್ಷ ರುದ್ರಗೌಡ ಪಾಟೀಲ, ವೆಂಕಟರೆಡ್ಡಿ ಅಬ್ಬೆತುಮಕೂರು, ಲಲಿತಾ ಅನಪುರ, ನಗರಸಭೆ ಸದಸ್ಯ ಹಣಮಂತ ಇಟಿಗಿ, ಸ್ವಾಮಿದೇವ ದಾಸನಕೆರಿ, ಅಂಬಯ್ಯ ಶಾಬಾದಿ, ಚಂದ್ರಶೇಖರ ಕಡೇಸೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net